ಹೊಸದಿಲ್ಲಿ: ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಸಿ ಪ್ರಾಯೋಜಕತ್ವ ಗಲಭೆ ಸೃಷ್ಟಿಸಿದ್ದ ನಿಷೇತ ಪಾಪುಲರ್ ಫ್ರಂಟ್ಆಫ್ ಇಂಡಿಯಾ (ಪಿಎಫ್ಐ)ಹಾಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ)ಸಂಘಟನೆಗಳ ಬ್ಯಾಂಕ್ ಖಾತೆಗೆ ಕಳೆದ ಕೆಲ ವರ್ಷಗಳಿಂದ 100 ಕೋಟಿ ರೂ. ಹಣ ಜಮೆಯಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಬಹಿರಂಗಪಡಿಸಿದೆ.
ದೇಶವಿರೋ ಕೃತ್ಯಗಳಲ್ಲಿ ಭಾಗಿಯಾಗಿರುವ ಹಿನ್ನೆಲೆ ನಿಷೇತವಾಗಿರುವ ಪಿಎಫ್ಐ ಮತ್ತದರ ಅಂಗಸಂಸ್ಥೆಗಳ ವಿರುದ್ಧ ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಸಂಬಂಸಿದಂತೆ ಇಡಿ ತನಿಖೆ ನಡೆಸಿದ್ದು, ಕೊಚ್ಚಿಯ ಪಿಎಂಎಲ್ಎ ವಿಶೇಷ ನ್ಯಾಯಾಲಯದಲ್ಲಿ ಗುರುವಾರ ವರದಿ ಸಲ್ಲಿಸಿದೆ.
ವರದಿಯಲ್ಲಿ 2013ರಿಂದಲೂ ಪಿಎಫ್ಐ ನಿಗದಿತ ಅಪರಾಧ ಕಾರ್ಯಗಳಲ್ಲಿ ತೊಡಗಿರುವುದು ತಿಳಿದುಬಂದಿದ್ದು, 2014ರ ಬಳಿಕ ಸಂಘಟನೆಯ ಮುಖ್ಯಸ್ಥನ ಬ್ಯಾಂಕ್ ಖಾತೆಗಳಿಗೆ ಹಣಜಮೆಯಾಗುತ್ತಿರುವ ಪ್ರಮಾಣವೂ ಹೆಚ್ಚಿದೆ ಎಂದು ಉಲ್ಲೇಖಿಸಲಾಗಿದೆ. ಜತೆಗೆ ಇತ್ತೀಚಿನ ವರ್ಷಗಳಲ್ಲೇ 100 ಕೋಟಿ ರೂ.ಹಣ ಜಮೆಯಾಗಿದ್ದು, ಅದರಲ್ಲಿ ಬಹುಪಾಲು ನಗದು ರೂಪದಲ್ಲೇ ಜಮೆಯಾಗಿದೆ ಎಂತಲೂ ಇಡಿ ಅಕಾರಿಗಳು ಹೇಳಿದ್ದಾರೆ.
2019ರ ಡಿಸೆಂಬರ್ನಿಂದ 2020ರ ಫೆಬ್ರವರಿವರೆಗೆ ಸಿಎಎ ವಿರುದ್ಧದ ಗಲಭೆಗಾಗಿ ಈ ಹಣವನ್ನು ಬಳಕೆಮಾಡಲಾಗಿದ್ದು, ಪಿಎಫ್ಐ ಪ್ರಮುಖ ನಾಯಕರು ಇದರಲ್ಲಿ ಭಾಗಿಯಾಗಿದ್ದಾರೆಂದು ತಿಳಿದುಬಂದಿದೆ. ಈ ಹಿನ್ನೆಲೆ ತನಿಖೆ ಮುಂದುವರಿಸುವ ಉದ್ದೇಶದಿಂದ ಸಿಎಫ್ಐ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಕೆ.ಎ.ರೌಫ್ ಷರೀಫ್ ಬಂಧನ ಇನ್ನೂ ಮೂರು ದಿನಗಳವರೆಗೆ ವಿಸ್ತರಿಸುವಂತೆ ಕೋರಲಾಗಿದೆ.
ಸಿಎಎ ವಿರೋಸಿ ದಿಲ್ಲಿಯಲ್ಲಿ ನಡೆಸಿದ ಗಲಭೆಯಲ್ಲಿ ಹಲವಾರು ಜನ ಪ್ರಾಣ ಕಳೆದುಕೊಂಡಿದ್ದು, ಈ ಹಿಂಸಾಚಾರದ ಹಿಂದೆ ಆಪ್ ಮಾಜಿ ಕೌನ್ಸಿಲರ್ ಒಬ್ಬರ ವಿರುದ್ಧವೂ ತನಿಖೆ ನಡೆಯುತ್ತಿದೆ.