ಪ್ರಧಾನಿ ನರೇಂದ್ರ ಮೋದಿ ಮಾತು ಆತ್ಮನಿರ್ಭರ ಭಾರತ ಠಾಗೂರರ ಪರಿಕಲ್ಪನೆ

**HANDOUT PHOTO MADE AVAILABLE FROM PIB ON THURSDAY, DEC. 24, 2020** New Delhi: Prime Minister Narendra Modi addresses at the centenary celebration of Visva-Bharati University, Shantiniketan, through video conference, in New Delhi, Thursday, Dec. 24, 2020. (PTI Photo)(PTI24-12-2020_000140B)

ಶಾಂತಿನಿಕೇತನ್(ಪ. ಬಂಗಾಳ): ಭಾರತ ಮತ್ತು ಜಗತ್ತನ್ನೇ ಸ್ವಾವಲಂಬಿಯಾಗಿಸುವ ಆತ್ಮನಿರ್ಭರ ಭಾರತವು ಗುರುದೇವ ರವೀಂದ್ರನಾಥ ಠಾಗೂರರ ದೂರದೃಷ್ಟಿಯ ಪರಿಕಲ್ಪನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಶಾಂತಿನಿಕೇತನ್‍ನಲ್ಲಿನ ವಿಶ್ವ ಭಾರತಿ ವಿಶ್ವವಿದ್ಯಾನಿಲಯದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ವಿಡಿಯೋ ಕಾನರೆನ್ಸ್ ಮೂಲಕ ಭಾಷಣ ಮಾಡಿದ ಅವರು, ಭಾರತದ ಸ್ವಾತಂತ್ರ್ಯ ಚಳವಳಿ ಹಾಗೂ ಜಾಗತಿಕ ಸಹೋದರತ್ವದಲ್ಲಿ ವಿಶ್ವ ಭಾರತಿ ವಿಶ್ವವಿದ್ಯಾನಿಲಯ ಬಹು ಮುಖ್ಯ ಪಾತ್ರ ನಿರ್ವಹಿಸಿತ್ತುಎಂದರು.
ರಾಷ್ಟ್ರೀಯತೆ ಸೂರ್ತಿಯೊಂದಿಗೆ ವಿಶ್ವ ಬಂಧುತ್ವ ಬಲಿಷ್ಠ
ಆತ್ಮನಿರ್ಭರ ಭಾರತವು ಜಾಗತಿಕ ಅಭಿವೃದ್ಧಿಯಲ್ಲಿ ದೇಶದ ಅಭಿವೃದ್ಧಿಗೆ ಹಾದಿಯಾಗಿದೆ. ಸಮೃದ್ಧಿಯ ಜಗತ್ತಿಗೆ ಭಾರತದ ಸಬಲೀಕರಣ ಅಭಿಯಾನವಾಗಿದೆ ಎಂದು ಮೋದಿ ಠಾಗೂರರ ದೂರದೃಷ್ಟಿಯನ್ನು ಶ್ಲಾಘಿಸಿದ್ದಾರೆ.
ವಿಶ್ವ ವಿದ್ಯಾನಿಲಯವು ಕೇವಲ ರಾಷ್ಟ್ರೀಯತೆಯ ಸೂರ್ತಿಯನ್ನಷ್ಟೇ ಸದೃಢಗೊಳಿಸಿಲ್ಲ. ಬದಲಿಗೆ ವಿಶ್ವ ಬಂಧುತ್ವವನ್ನೂ ಬಲಿಷ್ಠಗೊಳಿಸಿದೆ ಎಂದಿದ್ದಾರೆ.
ವೇದದಿಂದ ವಿವೇಕಾನಂದರವರೆಗಿನ ಠಾಗೂರರ ಚಿಂತನೆಗಳು ಭಾರತದ ಸಮಗ್ರ ಚಿಂತನೆಗಳ ಮೇಲೆ ಬೆಳಕು ಚೆಲ್ಲಿವೆ . ಈ ಚಿಂತನೆಗಳು ಎಂದಿಗೂ ಅಂತರ್ಮುಖಿಯಾಗಿರಲಿಲ್ಲ ಎಂದು ಮೋದಿ ವಿವರಿಸಿದ್ದಾರೆ.
ಉತ್ತಮ ಸಂಗತಿ ಕಲಿಕೆ ಸ್ವಾಗತಿಸುತ್ತಿದ್ದ ಠಾಗೂರರು
ಭಾರತದಲ್ಲಿ ಶ್ರೇಷ್ಠ ಸಂಗತಿಯ ಪ್ರಯೋಜನವನ್ನು ಜಗತ್ತು ಪಡೆಯಬೇಕು. ಅದೇ ರೀತಿ ಭಾರತ ಸಹ ಜಗತ್ತಿನ ಇತರೆಡೆಗಳಲ್ಲಿನ ಉತ್ತಮ ಸಂಗತಿಗಳನ್ನು ಕಲಿಯಬೇಕು ಎನ್ನುವುದು ಠಾಗೂರರ ದೃಷ್ಟಿಕೋನವಾಗಿತ್ತು. ವಿಶ್ವ ಭಾರತಿ ವಿಶ್ವವಿದ್ಯಾಲಯದ ಹೆಸರಿನಲ್ಲಿಯೇ ಸಹಕಾರ ಮತ್ತು ಸಹಭಾಗಿತ್ವ ಪದದ ಅರ್ಥ ಅಡಗಿದ್ದು, ಇದು ಜಗತ್ತಿನೊಂದಿಗೆ ಭಾರತದ ಸಹಕಾರವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ