ವಾಷಿಂಗ್ಟನ್: ಪಿಎನ್ಬಿ ಬ್ಯಾಂಕ್ ಹಗರಣ ಸಂಬಂಧ ಸದ್ಯ ಲಂಡನ್ ಜೈಲಿನಲ್ಲಿರುವ ದೇಶಭಷ್ಟ್ರ ಆರ್ಥಿಕ ಅಪರಾ ನೀರವ್ ಮೋದಿ ಸಹೋದರ ನೆಹಾಲ್ ಮೋದಿ ವಿರುದ್ಧ ಅಮೆರಿಕ ಕೋರ್ಟ್ನಲ್ಲಿ ವಜ್ರ ಕಂಪನಿಯೊಂದಕ್ಕೆ 2.6 ದಶಲಕ್ಷ ಡಾಲರ್ ವಂಚನೆ ಮಾಡಿರುವ ಪ್ರಕರಣ ದಾಖಲಾಗಿದೆ.
ಅಮೆರಿಕದ ಮ್ಯಾನ್ಹ್ಯಾಟನ್ ಮೂಲದ ಅಗ್ರ ವಜ್ರ ಸಂಸ್ಥೆಗಳಲ್ಲಿ ಒಂದಾಗಿರುವ ಎಲ್ಎಲ್ಡಿ ಡೈಮಂಡ್ಸ್ ಕಂಪನಿಯಿಂದ ಅಕ್ರಮವಾಗಿ ಡೈಮಂಡ್ಸ್ ಪಡೆದುಕೊಂಡ ಪ್ರಕರಣ ಇದಾಗಿದ್ದು, ನ್ಯೂಯಾರ್ಕ್ ಸುಪ್ರೀಂಕೋರ್ಟ್ ಮೊದಲ ಶ್ರೇಣಿಯ ಚೌರ್ಯ ಎಂಬ ಆರೋಪದ ಅನ್ವಯ ಪ್ರಕರಣ ದಾಖಲಿಸಿದೆ.
ಅನುಕೂಲಕರ ಸಾಲ ನಿಯಮಗಳ ಅನ್ವಯ ಸುಳ್ಳು ದಾಖಲೆಗಳ ನೀಡಿ ಕಂಪನಿಯಿಂದ ವಜ್ರಗಳನ್ನು ಪಡೆದಿದ್ದ ನೆಹಾಲ್, ನಂತರ ತನ್ನ ವೈಯಕ್ತಿಕ ಕಾರಣಕ್ಕಾಗಿ ವಜ್ರ ಬಳಕೆ ಮಾಡಿಕೊಂಡಿದ್ದ ಎಂದು ಮ್ಯಾನ್ಹ್ಯಾಟನ್ ಜಿಲ್ಲಾ ಅಟಾರ್ನಿ ಕಚೇರಿ ಡಿಸೆಂಬರ್ 18ರಂದು ಕೋರ್ಟ್ನಲ್ಲಿ ಹೇಳಿಕೆ ನೀಡಿದೆ.
ವಜ್ರಗಳು ಶಾಶ್ವತವಾಗಿದ್ದರೂ, ಇವನ್ನು ಪಡೆಯಲು ಹೆಣೆದ ತಂತ್ರ ಶಾಶ್ವತವಲ್ಲ. ಹಾಗಾಗಿ ನೆಹಾಲ್ ಇನ್ನೂ ನ್ಯೂಯಾರ್ಕ್ ಸುಪ್ರೀಂಕೋರ್ಟ್ ದೋಷಾರೋಪಣೆ ಪ್ರಕ್ರಿಯೆ ಎದುರಿಸಬೇಕಾಗುತ್ತದೆ ಎಂದು ಮ್ಯಾನ್ಹಟನ್ ಜಿಲ್ಲಾ ಅಟಾರ್ನಿ ಸೈ ವಾನ್ಸ್ ಜೂನಿಯರ್ ತಿಳಿಸಿದ್ದಾರೆ.