ಶೈಕ್ಷಣಿಕ -ಸಾಮಾಜಿಕ ಜನಗಣತಿ ಸಮಗ್ರ ಅಧ್ಯಯನ ಅಧ್ಯಯನದ ನಂತರ ಸರ್ಕಾರಕ್ಕೆ ವರದಿ

ಬೆಂಗಳೂರು: ಹಿಂದಿನ ಸರ್ಕಾರದ ಅವಯಲ್ಲಿ ಸಿದ್ಧಗೊಂಡ ಶೈಕ್ಷಣಿಕ ಹಾಗೂ ಸಾಮಾಜಿಕ ಜನಗಣತಿ ವರದಿಯ ಸಮಗ್ರ ಅಧ್ಯಯನ ಅವಶ್ಯಕತೆ ಇದೆ ಎಂದು
ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ನೂತನ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಗುರುವಾರ ಆಯೋಗದ ಅಧ್ಯಕ್ಷರಾಗಿ ಅಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 160 ಕೋಟಿ ರೂ. ಖರ್ಚು ಮಾಡಿ ಜನಗಣತಿ ವರದಿ ತಯಾರಿಸಲಾಗಿದೆ. ಹಿಂದಿನ ಸರ್ಕಾರದ ಅವಯಲ್ಲಿ ಯಾಕೆ ಸರ್ಕಾರಕ್ಕೆ ಸಲ್ಲಿಸಿಲ್ಲ ಎಂಬುದು ಗೊತ್ತಿಲ್ಲ ಎಂದು ತಿಳಿಸಿದರು.
ಆಯೋಗಕ್ಕೆ ಸದಸ್ಯರ ನೇಮಕಾತಿ ಆಗಬೇಕಿದೆ. ನೇಮಕಾತಿ ಬಳಿಕ ವರದಿಯನ್ನು ಸಂಪೂರ್ಣ ಅಧ್ಯಯನ ನಡೆಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಹಿಂದಿನ ಆಯೋಗಗಳ ತೀರ್ಮಾನಗಳ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದರು.
ನಾನು ಅಕಾರ ವಹಿಸಿಕೊಳ್ಳುತ್ತಿರುವುದು ತಿಳಿಯುತ್ತಿದ್ದಂತೆ ಹಲವು ಸಮುದಾಯಗಳಿಂದ ಹೊಸ ಬೇಡಿಕೆಗಳು ಬಂದಿವೆ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷೆ ನ್ಯಾ.ರೋಹಿಣಿ ಅವರು ಕೆಲವು ಮಾಹಿತಿಗಳನ್ನು ಕೇಳಿದ್ದಾರೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ