ಮೇಲ್ಮನೆಯಲ್ಲಿ ಅನಪೇಕ್ಷಿತ ಘಟನೆಯ ಸದನ ಸಮಿತಿ ವರದಿ ಮಂಡನೆ ಡಿಸಿಎಂ, ಸಭಾನಾಯಕರ ನಿರ್ಬಂಸುವಂತೆ ಶಿಫಾರಸು

ಬೆಂಗಳೂರು: ಕಳೆದ ಅವೇಶನದ ಕೊನೆಯ ದಿನ ಡಿ.15 ರಂದು ವಿಧಾನಪರಿಷತ್ತಿನಲ್ಲಿ ನಡೆದ ಅನಪೇಕ್ಷಿತ ಘಟನೆ ಸಂಬಂಧ ಸದನ ಸಮಿತಿಯು ಅಂತಿಮ ವರದಿ ಸಲ್ಲಿಸುವವರೆಗೆ ಕೆ.ಆರ್. ಮಹಾಲಕ್ಷ್ಮೀ ಅವರು ಕಾರ್ಯದರ್ಶಿ ಸ್ಥಾನದಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಸಬೇಕೆಂದು ಶಿಫಾರಸು ಮಾಡಲಾಗಿದೆ.
ಅಚ್ಚರಿಯೆಂದರೆ ಕಲಾಪ ನಡೆಯಲು ಅಗತ್ಯ ಪಾತ್ರ ವಹಿಸುವ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಡಿಸಿಎಂ ಡಾ.ಅಶ್ವತ್ಥನಾರಾಯಣ, ನೂತನ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹಾಗೂ ಸಭಾಪತಿ ಸ್ಥಾನ ಏರಲಿರುವ ಮೇಲ್ಮನೆಯ ಅತಿ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಅವೇಶನದ ಕಲಾಪದಿಂದ ಹೊರಗುಳಿಸಬೇಕು ಎಂಬ ಶಿಫಾರಸು ಮಾಡಲಾಗಿದೆ. ಇದು ಪರಿಷತ್ ಸದಸ್ಯರಲ್ಲೇ ಚರ್ಚೆಗೆ ಗ್ರಾಸ ಒದಗಿಸಿದೆ.
ಸಭಾನಾಯಕ ಹಾಗೂ ಡಿಸಿಎಂ ಅವರನ್ನು ಕಲಾಪದಿಂದ ಹೊರಗುಳಿಸುವ ಸೂಚನೆ ನೀಡುವ ಹಕ್ಕು ಸದನ ಸಮಿತಿಗೆ ಇದೆಯೇ ಎಂಬ ಪ್ರಶ್ನೆ ಮೂಡಿದೆ. ಸಮಿತಿಯು ಘಟನೆಗೆ ಕಾರಣದ ಸದಸ್ಯರ ಬಗ್ಗೆ ಸಮರ್ಪಕ ಕ್ರಮ ಸೂಚಿಸಿಲ್ಲ ಎಂಬ ಆಕ್ಷೇಪವೂ ವ್ಯಕ್ತವಾಗಿದೆ.
ಶುಕ್ರವಾರ ಮರಿತಿಬ್ಬೇಗೌಡ ಅಧ್ಯಕ್ಷತೆಯ ತ್ರಿಸದ್ಯ ಸದನ ಸಮಿತಿಯು ಸಲ್ಲಿಸಿದ್ದ ವರದಿಯನ್ನು ಮೇಲ್ಮನೆಯಲ್ಲಿ ಮಂಡಿಸಲಾಯಿತು. ಪ್ರಮುಖವಾಗಿ 12 ಶಿಫಾರಸುಗಳನ್ನು ಮಾಡಿರುವ ಸಮಿತಿಯು ಮುಂದಿನ ಹಂತದ ವಿಚಾರಣೆಗಾಗಿ ಹೆಚ್ಚುವರಿ 3 ತಿಂಗಳ ಕಾಲಾವಕಾಶ ಪಡೆದುಕೊಂಡಿದೆ.
ಕಾರ್ಯದರ್ಶಿಯವರ ಆಡಳಿತಾತ್ಮಕ ಕರ್ತವ್ಯ ನಿರ್ಲಕ್ಷತೆ ಮತ್ತು ಬೇಜವಾಬ್ದಾರಿತನದ ವರ್ತನೆ ಬಗ್ಗೆ ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಾೀಶರ ನೇತೃತ್ವದಲ್ಲಿ ಇಲಾಖಾ ವಿಚಾರಣೆ ನಡೆಸಬೇಕೆಂದು ವಿಶೇಷ ಮಂಡಳಿಗೆ ಶಿಫಾರಸು ಮಾಡಿದೆ.
ಉಪಸಭಾಪತಿಯವರು ನಿಯಮಬಾಹಿರವಾಗಿ ಪೀಠ ಅಲಂಕರಿಸಲು ಪ್ರಚೋದನೆ ನೀಡಿದ ಅಂದಿನ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಅಸಂಸದೀಯ ನಡವಳಿಕೆಯನ್ನ ಖಂಡಿಸಿದ್ದು, ಇವರೊಟ್ಟಿಗೆ ಕೋಟಾ ಶ್ರೀನಿವಾಸ ಪೂಜಾರಿ, ಅರುಣ್ ಶಹಾಪುರ ಅವರು ಸರ್ಕಾರದ ಯಾವುದೇ ಜವಾಬ್ದಾರಿಯುತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವುದು ಸೂಕ್ತವಲ್ಲ.
ಸಭಾಪತಿಯವರ ಪ್ರವೇಶಕ್ಕೆ ಅಡ್ಡಿಪಡಿಸಿದ ಸದಸ್ಯರಾದ ಎಂ.ಕೆ. ಪ್ರಾಣೇಶ್, ಡಾ.ವೈ.ಎ. ನಾರಾಯಣಸ್ವಾಮಿ, ಅರುಣ್ ಶಹಾಪುರ ಮತ್ತು ಉಪಸಭಾಪತಿಯನ್ನು ಬಲವಂತವಾಗಿ ಪೀಠದಲ್ಲಿ ಕೂರಿಸಿದ ಬಸವರಾಜ ಹೊರಟ್ಟಿ, ಕೆ.ಟಿ. ಶ್ರೀಕಂಠೇಗೌಡ, ಗೋವಿಂದರಾಜ್ ಅವರುಗಳು ಮುಂದಿನ 2 ಅವೇಶನ ಅವಗೆ ಭಾಗವಹಿಸಬಾರದು.
ಉಪಸಭಾಪತಿಯವರ ನಿಯಮ ಬಾಹಿರ ನಡವಳಿಕೆಯಿಂದ ಪ್ರಚೋದಿತಗೊಂಡು ಪ್ರತಿಕ್ರಿಸುವ ಭರದಲ್ಲಿ ಸಭಾಪತಿ ಪೀಠದಲ್ಲಿ ಕುಳಿತ ಚಂದ್ರಶೇಖರ ಪಾಟೀಲ್ ಹಾಗೂ ಸಭಾಪತಿಯವರ ಪ್ರವೇಶ ದ್ವಾರ ಕಾಲಿನಿಂದ ಒದ್ದು, ಉಪಸಭಾಪತಿಯನ್ನು ಪೀಠದಿಂದ ಕೆಳಗಿಳಿಸಿದ ನಜೀರ್ ಅಹ್ಮದ್, ಪ್ರತಿಪಕ್ಷದ ಮುಖ್ಯಸಚೇತಕ ಎಂ.ನಾರಾಯಣಸ್ವಾಮಿ, ಶ್ರೀನಿವಾಸ ವಿ.ಮಾನೆ, ಪ್ರಕಾಶ್ ಕೆ. ರಾಥೋಡ್‍ರನ್ನು ಮುಂದಿನ 1 ಅವೇಶನದ ಕಾರ್ಯಕಲಾಪದಲ್ಲಿ ಭಾಗವಹಿಸದಂತೆ ನಿರ್ಬಂಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿಯು ಮಧ್ಯಂತರ ವರದಿ ಆಗಿರುವ ಕಾರಣ ಚರ್ಚೆಗೆ ಅವಕಾಶ ನೀಡಲಾಗದು. ಪೂರ್ಣ ವರದಿ ಸಲ್ಲಿಸಿದ ನಂತರ ಚರ್ಚೆಗೆ ಒಪ್ಪಿಗೆ ನೀಡಲಾಗುವುದು ಎಂದು ಸಭಾಪತಿ ರೂಲಿಂಗ್ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ