ಹೊಸದಿಲ್ಲಿ: ಹವಾಮಾನ ಬದಲಾವಣೆ ತಗ್ಗಿಸಲು ದೇಶದ ತಾಪಮಾನವನ್ನು 2 ಡಿಗ್ರಿ ಸೆಲ್ಶಿಯಸ್ಗೆ ಕಾಯ್ದಿರಿಸುವ ಸವಾಲಿನಲ್ಲಿ ಜಿ-20 ಒಕ್ಕೂಟ ರಾಷ್ಟ್ರಗಳ ಪೈಕಿ ಕೇವಲ ಭಾರತ ಯಶಸ್ವಿಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಜತೆಗೆ ಚೀನಾ ಹವಾಮಾನ ಬದಲಾವಣೆ ತಗ್ಗಿಸಲು ಹೆಚ್ಚಿನ ಕ್ರಮಕೈಗೊಳ್ಳಬೇಕಿದೆ ಎಂದೂ ವರದಿ ಹೇಳಿದೆ.
ಹವಾಮಾನ ಬದಲಾವಣೆ ಕುರಿತಂತೆ ಜಿ-20 ಒಕ್ಕೂಟ ರಾಷ್ಟ್ರಗಳು ಕೈಗೊಂಡ ಕ್ರಮಗಳನ್ನು ಪರಿಶೀಲಿಸಿ 14 ಜಾಗತಿಕ ಸಂಶೋಧನಾ ಸಂಸ್ಥೆಗಳು ಜಂಟಿಯಾಗಿ ಹವಾಮಾನ ಪಾರದರ್ಶಕತೆ ಎಂಬ ಶೀರ್ಷಿಕೆಯಲ್ಲಿ ವರದಿ ಬಿಡುಗಡೆಮಾಡಿವೆ.
ಹವಾಮಾನ ಬದಲಾವಣೆ ತಗ್ಗಿಸಲು 2015ರ ಪ್ಯಾರಿಸ್ ಒಪ್ಪಂದದ ಅನ್ವಯ ಜಿ -20 ರಾಷ್ಟ್ರಗಳ ಮುಂದಿಟ್ಟಿದ್ದ ಹಲವು ಗುರಿಗಳ ಪೈಕಿ, ತಾಪಮಾನವನ್ನು 1.5 ಸೆಲ್ಶಿಯಸ್ಗೆ ಕಾಯ್ದಿರಿಸುವುದು ಒಂದಾಗಿತ್ತು.ಆದರೆ ಸತತವಾಗಿ 2 ಡಿಗ್ರಿ ತಾಪಮಾನ ಕಾಯ್ದಿರಿಸಿಕೊಂಡಿರುವ ಏಕೈಕ ರಾಷ್ಟ್ರ ಭಾರತವಾಗಿದ್ದು, ಈ ಮೂಲಕ ಮೊದಲ ಗುರಿಯನ್ನು ಸಾಸುವ ಬಹುತೇಕ ಸಮೀಪದಲ್ಲದೆ. ಅಲ್ಲದೇ ದೇಶದಲ್ಲಿ ಜಾಗತಿಕ ತಾಪಮಾನ ಏರಿಕೆ (ಗ್ಲೋಬಲ್ ವಾರ್ಮಿಂಗ್) ತಗ್ಗಿಸಲು ಭಾರತ ನೆರವಾಗಿದೆ ಎಂದು ವರದಿ ಹೇಳಿದೆ.
ಈ ಹಿಂದೆ ಚೀನಾ 2060ರೊಳಗೆ ದೇಶದಲ್ಲಿ ಇಂಗಾಲ ಹೊರಸೂಸುವಿಕೆ ಪ್ರಮಾಣ ಇಳಿಸುವುದಾಗಿ ಘೋಷಿಸಿದ್ದರೂ, ರಾಷ್ಟ್ರವನ್ನು ಇನ್ನಷ್ಟು ಕ್ರಮಕೈಗೊಳ್ಳಬೇಕಿರುವ ವರ್ಗಕ್ಕೆ ಸೇರಿಸಲಾಗಿದೆ.
ವಿಷಾನಿಲ ಹೊರಸೂಸುವಿಕೆ ಪ್ರಮಾಣವನ್ನು ಶೇ.33-35ಕ್ಕೆ ಇಳಿಸಲು ಹಾಗೂ ಇಂಧನ, ಸಾರಿಗೆ ಸೇರಿ ಮುಂತಾದ ವಲಯದಲ್ಲಿ ವಾಯು ಮಾಲಿನ್ಯ ತಡೆಗಟ್ಟಲು ಕ್ರಮ ಕೈಗೊಳ್ಳುವ ಬಗ್ಗೆ ಭಾರತ ದೂರದೃಷ್ಟಿ ಹಂಚಿಕೊಂಡಿದ್ದನ್ನು ಕೂಡ ವರದಿಯಲ್ಲಿ ಶ್ಲಾಘಿಸಲಾಗಿದೆ. ಆದರೆ ಪ್ಯಾರಿಸ್ ಒಪ್ಪಂದದಲ್ಲಿರುವ 1.5 ಡಿಗ್ರಿ ಸೆಲ್ಶಿಯಸ್ ಕಾಯ್ದಿರಿಸುವ ಗುರಿ ಸಾಸಲು ಭಾರತ ಇನ್ನೂ ಶ್ರಮಿಸಬೇಕಿದೆ ಎಂದಿದೆ.