10ಕೋಟಿ ರೂ. ದಂಡ ಪಾವತಿಸಿದ ಶಶಿಕಲಾ

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ನಗರದ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಆಪ್ತೆ ಶಶಿಕಲಾ ಅವರು ನ್ಯಾಯಾಲಯದ ಆದೇಶದಂತೆ 10ಕೋಟಿ ರೂ. ದಂಡ ಪಾವತಿಸಿದ್ದಾರೆ.
ಶಶಿಕಲಾ, ಇಳವರಿಸಿ ಹಾಗೂ ಸುಧಾಕರನ್ ಅವರ ಜೈಲುಶಿಕ್ಷೆ 2021ರ ಜ.27ಕ್ಕೆ ಕೊನೆಗೊಳ್ಳಲಿದ್ದು, ದಂಡದ ಮೊತ್ತವನ್ನು ಶಶಿಕಲಾ ಪರವಾಗಿ ರಾಜಕೀಯ ವ್ಯಕ್ತಿಯೊಬ್ಬರು ಆಕ್ಸಿಸ್ ಬ್ಯಾಂಕ್ ಹಾಗೂ ಭಾರತೀಯ ಸ್ಟೇಬ್ ಬ್ಯಾಂಕ್‍ನ ಎರಡು ಡಿಮ್ಯಾಂಡ್ ಡ್ರಾಫ್ಟ್‍ಗಳಲ್ಲಿ ತುಂಬಿಸಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಪಾವತಿಸಿದ್ದಾರೆ ಎನ್ನಲಾಗುತ್ತಿದೆ.
ಹಿನ್ನೆಲೆ: ಜಯಲಲಿತ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ವೇಳೆ ಜಯಲಲಿತಾ, ಸುಧಾಕರನ್, ಇಳವರಸಿ ಹಾಗೂ ಶಶಿಕಲಾ ಅವರು ಆದಾಯ ಮೀರಿ ಅಕ್ರಮ ಆಸ್ತಿ ಸಂಪಾದಿಸಿರುವ ಬಗ್ಗೆ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯಲ್ಲಿ ಅವರ ಮೇಲಿನ ಆರೋಪಗಳು ಸಾಬೀತಾಗಿ 2017ರ ಫೆ.15ರಂದು 4ವರ್ಷ ಜೈಲು ಶಿಕ್ಷೆ ಹಾಗೂ ಜಯಲಲಿತಾ ಅವರಿಗೆ 100ಕೋಟಿ ರೂ. ಶಶಿಕಲಾ, ಇಳವರಸಿ ಹಾಗೂ ಸುಧಾಕರನ್ ಅವರಿಗೆ ತಲಾ 10ಕೋಟಿ ರೂ. ದಂಡ ವಿಸಿ ನ್ಯಾಯಾೀಶರು ಆದೇಶ ಹೊರಡಿಸಿದ್ದರು. ತೀರ್ಪು ಹೊರ ಬೀಳುವ ಮುನ್ನ ಜಯಲಲಿತಾ ಅವರು ಅನಾರೋಗ್ಯದಿಂದ ಮೃತಪಟ್ಟಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ