
ಹೊಸದಿಲ್ಲಿ: ಕೊರೋನಾ ಬಿಕ್ಕಟ್ಟಿನ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಬೀದಿಬದಿ ವ್ಯಾಪಾರಿಗಳಿಗೆ ನೆರವು ನೀಡಲು ಕೇಂದ್ರ ಸರ್ಕಾರ ಘೋಷಿಸಿದ್ದ ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿ ಆತ್ಮನಿರ್ಭರ ನಿ ಯೋಜನೆ(ಪಿಎಂ -ಸ್ವನಿ) ಅನ್ವಯ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸುಮಾರು 30,000 ವ್ಯಾಪಾರಿಗಳಿಗೆ ಆನ್ಲೈನ್ ಮೂಲಕ ಸಾಲ ವಿತರಿಸಲಿದ್ದಾರೆ. ಅಲ್ಲದೇ ಇದೇ ವೇಳೆ ಯೋಜನೆಯ ಫಲಾನುಭವಿಗಳೊಂದಿಗೂ ಮಾತನಾಡಲಿದ್ದಾರೆ.
ಪಿಎಂ ಸ್ವನಿ ಅನ್ವಯ ಬೀದಿ ಬದಿ ವ್ಯಾಪಾರಿಗಳು ವಿನಾಯಿತಿ ದರದಲ್ಲಿ ವ್ಯಾಪಾರ ಆರಂಭಿಸಲು 10,000ರೂ. ತನಕ ಸಾಲ ಪಡೆಯಬಹುದು. ಯೋಜನೆಯ ಲಾಭ ಪಡೆಯಲು ಉತ್ತರಪ್ರದೇಶ ಒಂದು ರಾಜ್ಯದಲ್ಲಿ ಇದುವರೆಗೂ 5.57 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ದೇಶದಲ್ಲೇ ಅತಿ ದೊಡ್ಡ ಸಂಖ್ಯೆ ಇದಾಗಿದೆ. ಸಂವಾದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಭಾಗಿಯಾಗಲಿದ್ದಾರೆ.