ಬೆಂಗಳೂರು: ಮುಂಗಾರು ಅವಯಲ್ಲಿ ಅತಿವೃಷ್ಟಿಯಿಂದಾಗಿರುವ ನಷ್ಟದ ಕುರಿತು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು, ಸೂಕ್ತ ಪ್ರಸ್ತಾವನೆಗಳೊಂದಿಗೆ ನೆರವು ಕೇಳಲು ರಾಜ್ಯ ಸರ್ಕಾರ ನಿರ್ಣಯ ಕೈಗೊಂಡಿದೆ.
ಗುರುವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡಿದ್ದು, ನೆರೆಬಾತ ಪ್ರದೇಶಗಳಿಗೆ ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ. ಸಂತ್ರಸ್ತರ ಹಿತ ಕಾಯುವ ಸಲುವಾಗಿ ಸೂಕ್ತ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದರು.
ಪ್ರಾಥಮಿಕ ಅಂದಾಜಿನ ಪ್ರಕಾರ 15 ಸಾವಿರ ಕೋಟಿ ರೂ.ಗಳಿಗಿಂತ ಅಕ ಮೊತ್ತದ ನಷ್ಟ ಸಂಭವಿಸಿದ್ದು, ವೈಮಾನಿಕ ಸಮೀಕ್ಷೆಯನ್ನೂ ಮಾಡಿ ವಾಸ್ತವ ಸ್ಥಿತಿ ಅರಿತಿದ್ದೇನೆ. ಸ್ಥಳೀಯ ಹಂತದಿಂದ ವರದಿ ಬರಬೇಕಿದ್ದು, ಬಂದ ಕೂಡಲೇ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತದೆ. ಸಾಧ್ಯವಾದಷ್ಟು ಬೇಗನೆ ಪರಿಹಾರ ಬಿಡುಗಡೆ ಮಾಡುವಂತೆ ಒತ್ತಡ ಹೇರುವುದಾಗಿಯೂ ಸಿಎಂ ಹೇಳಿದ್ದಾರೆ.
ಹಣಕಾಸಿನ ಕೊರತೆ ಇಲ್ಲ
ಸಚಿವ ಸಂಪುಟ ಸಭೆಗೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ನಾನು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರೆಲ್ಲರೂ ವೈಮಾನಿಕ ಸಮೀಕ್ಷೆ ನಡೆಸಿ, ಮೂರ್ನಾಲ್ಕು ಜಿಲ್ಲೆಯ ಪ್ರವಾಸ ಮಾಡಿ, ಕಲಬುರಗಿಯಲ್ಲಿ ಅಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭಾರೀ ಪ್ರವಾಸ ಸಂಭವಿಸಿದೆ. ಬಹಳ ಮುಖ್ಯವಾಗಿ ಬೆಳೆ ನಾಶವಾಗಿದೆ. ಕೇಂದ್ರ ಸರ್ಕಾರದ ಗಮನಕ್ಕೆ ಇದನ್ನೆಲ್ಲಾ ತರಲಾಗಿದೆ. ಹೆಚ್ಚಿನ ನೆರವು ನೀಡಲೂ ಮನವಿ ಮಾಡಲಾಗಿದೆ. ಈಗಾಗಲೇ ಪ್ರತಿ ಕುಟುಂಬಕ್ಕೆ 10 ಸಾವಿರ ರೂ. ನೀಡಲು ಶುರು ಮಾಡಿದ್ದು, ಹಣಕಾಸಿನ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.