ಭೀಮೆ, ಕೃಷ್ಣಾದಲ್ಲಿ ಏರಿಳಿತ

ಯಾದಗಿರಿ: ಕಳೆದ ಒಂದು ವಾರದಿಂದ ಜಿಲ್ಲೆಯ ಜನರಲ್ಲಿ ಆತಂಕ ಹುಟ್ಟಿಸಿದ ಭೀಮಾ ನದಿ ಪ್ರವಾಹದಲ್ಲಿ ಇಳಿಮುಖ ಕಂಡು ಬಂದರೆ, ಕೃಷ್ಣಾ ನದಿಯಲ್ಲಿ ಮಾತ್ರ ಏರಿಳಿತ ಕಂಡುಬರುತ್ತಿದೆ.
ಗುರುವಾರ ಸಂಜೆಯವರಿಗೆ ಸನ್ನತಿ ಬ್ಯಾರೇಜ್‍ನಿಂದ 1.28 ಲಕ್ಷ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಆದರೆ, ಕೃಷ್ಣಾ ನದಿಗೆ ಬಸವಸಾಗರದಿಂದ 84 ಸಾವಿರ ಕ್ಯೂಸೆಕ್ ನಿರು ಬಿಡಲಾಗುತ್ತಿದೆ.
ಭೀಮಾ ನದಿಯಲ್ಲಿ ಪ್ರವಾಹ ಇಳಿಮುಖವಾಗುತ್ತಿದ್ದಂತೆ ಜಲಾವೃತ ಗ್ರಾಮಗಳಲ್ಲಿ ಸತ್ತಮೀನುಗಳು ಸಂಗ್ರಹವಾಗಿ ದುರ್ನಾತ ಹುಟ್ಟಿದೆ. ಜಲಾವೃತಗೊಂಡ ಗ್ರಾಮಗಳ ಜನರು ತಮ್ಮ ಮನೆಗಳ ಸ್ವಚ್ಛತೆಯಲ್ಲಿ ತೊಡಗಿದ್ದು, ಅನೇಕ ಕ್ರಿಮಿಕೀಟಗಳು ಕಾಣಿಸುತ್ತಿವೆ.
ಅಲ್ಲದೆ, ಮನೆಯಲ್ಲಿದ್ದ ದವಸ ಧಾನ್ಯಗಳ ನೀರಿನಲ್ಲಿ ಕೊಳೆತ ಹೋದ ಕಾರಣ ದುರ್ನಾತ ಉಂಟಾಗಿದ್ದು, ಸಾಂಕ್ರಾಮಿಕ ರೋಗಗಳ ಹರಡುವ ಭೀತಿ ಉಂಟಾಗಿದೆ.
ಜಿಲ್ಲೆಯಲ್ಲಿ ಅಕ ಮಳೆಯಿಂದ ರಸ್ತೆಗಳಿಗೆ ಹಾನಿಯಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಇನ್ನೂ ಪ್ರವಾಹ ನಿಲ್ಲುತ್ತಿದ್ದಂತೆ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆ ಮಾಡಿ ಹಾನಿಯಾದ ರೈತರಿಗೆ ಕೂಡಲೇ ಪರಿಹಾರ ಒದಗಿಸಬೇಕು. ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಪರಿಹಾರ ಒದಗಿಸಲು ತಡ ಮಾಡಬಾರದು ಎಂದು ಅನ್ನದಾತರು ಮತ್ತು ವಿರೋಧ ಪಕ್ಷದ ಶಾಸಕರು ಸರಕಾರವನ್ನು ಆಗ್ರಹಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ