ನ್ಯೂಯಾರ್ಕ್: ಕೊರೋನಾ ಸೋಂಕಿತರ ಪತ್ತೆ, ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಆರೋಗ್ಯ ಸೇತು ಆ್ಯಪ್ಗೆ ವಿಶ್ವಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಭಾರತದಲ್ಲಿ ಸೋಂಕಿತರ ಪತ್ತೆ, ಜನರಲ್ಲಿ ಜಾಗೃತಿ, ಕೊರೋನಾ ಮಾದರಿ ಪರೀಕ್ಷೆ ಜಾಸ್ತಿಗೊಳಿಸುವುದು ಸೇರಿ ಹಲವು ರೀತಿಯಲ್ಲಿ ಆರೋಗ್ಯ ಸೇತು ಆ್ಯಪ್ ಸಹಕಾರಿಯಾಗಿದೆ. 15 ಕೋಟಿ ಜನ ಆ್ಯಪ್ ಬಳಸುತ್ತಿರುವುದು ಆ್ಯಪ್ ಪ್ರಾಮುಖ್ಯತೆಗೆ ಸಹಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಮಹಾ ನಿರ್ದೇಶಕ ಅಧಾನೊಮ್ ಘೆಬ್ರೆಯೆಸಸ್ ಶ್ಲಾಘಿಸಿದ್ದಾರೆ.
ಆರೋಗ್ಯ ಸೇತು ಆ್ಯಪ್ನಿಂದಾಗಿ ಸಾರ್ವಜನಿಕ ಆರೋಗ್ಯ ಇಲಾಖೆಗಳಿಗೆ ಸೋಂಕಿತರು ಜಾಸ್ತಿ ಇರುವ ಕ್ಲಸ್ಟರ್ಗಳನ್ನು ಗುರುತಿಸಲು, ಸೋಂಕಿನ ಲಕ್ಷಣ ಇರುವವರನ್ನು ಪತ್ತೆಹಚ್ಚಿ, ಅವರನ್ನು ಐಸೋಲೇಷನ್ನಲ್ಲಿಡಲು, ಮಾದರಿ ಪರೀಕ್ಷೆ ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೊರೋನಾ ಸೋಂಕಿತರ ಪತ್ತೆ ಹಚ್ಚಲು, ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಲು, ಜನರಿಗೆ ಜಾಗೃತಿ ಮೂಡಿಸುವುದು ಸೇರಿ ಹಲವು ಉದ್ದೇಶಗಳಿಗಾಗಿ ಕಳೆದ ಏಪ್ರಿಲ್ನಲ್ಲಿ ಕೇಂದ್ರ ಸರ್ಕಾರವು ಆರೋಗ್ಯ ಸೇತು ಆ್ಯಪ್ ಅಭಿವೃದ್ಧಿಪಡಿಸಿದ್ದು, ಕೋಟ್ಯಂತರ ಜನ ಬಳಸುತ್ತಿದ್ದಾರೆ. ಇದಕ್ಕೆ ಈ ಹಿಂದೆ ವಿಶ್ವಬ್ಯಾಂಕ್ ಸಹ ಮೆಚ್ಚುಗೆ ವ್ಯಕ್ತಪಡಿಸಿತ್ತು. ವಿಮಾನ ಪ್ರಯಾಣ ಸೇರಿ ಹಲವು ಕಡೆಯಲ್ಲಿ ಆರೋಗ್ಯ ಸೇತು ಆ್ಯಪ್ ಬಳಸುವುದನ್ನು ಕೇಂದ್ರ ಕಡ್ಡಾಯಗೊಳಿಸಿದೆ.