ಜೂನ್ 30ರಿಂದ ಪ್ರಧಾನಿ ಮೋದಿ ಮನ್ ಕಿ ಬಾತ್ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಎರಡನೇ ಅವಧಿಯ ಮೊದಲ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮ ಜೂ.30ರಿಂದ ಮತ್ತೆ ಆರಂಭವಾಗಲಿದೆ.

2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ಮೋದಿಯವರು ಅಕ್ಟೋಬರ್​ನಲ್ಲಿ ಮನ್​ ಕೀ ಬಾತ್​ ಎಂಬ ವಿನೂತನ ಕಾರ್ಯಕ್ರಮ ಪ್ರಾರಂಭಿಸಿದ್ದರು.

ತಿಂಗಳಿಗೊಮ್ಮೆ ಆಕಾಶವಾಣಿ ಮೂಲಕ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪ್ರಸಕ್ತ ವರ್ಷದ ಫೆಬ್ರುವರಿಯಲ್ಲಿ ಆಡಳಿತದ ಕೊನೆಯ ಮತ್ತು 53ನೇ ಮನ್​ ಕೀ ಬಾತ್​ ನಡೆಸಿ ಮುಕ್ತಾಯಗೊಳಿಸಿದ್ದರು.

ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಎರಡನೇ ಅವಧಿಗೆ ಪ್ರಧಾನಿ ಪಟ್ಟಕ್ಕೆರಿರುವ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮ ಮತ್ತೆ ಆರಂಭವಾಗುತ್ತಿದ್ದು, ಜೂನ್​ 30ರಂದು ಎರಡನೇ ಆವೃತ್ತಿಯ ಮೊದಲ ಕಾರ್ಯಕ್ರಮ ನಡೆಯಲಿದೆ.

ನರೇಂದ್ರ ಮೋದಿಯವರು ದೇಶದ ಜನರಿಗೆ ಸಂಬಂಧಪಟ್ಟ ಸಮಸ್ಯೆಗಳು, ವಿಚಾರಗಳ ಬಗ್ಗೆ ಮನ್​ ಕೀ ಬಾತ್​ದಲ್ಲಿ ಮಾತನಾಡಲಿದ್ದಾರೆ. ಹಾಗೇ ಅವರು ಯಾವ ವಿಷಯದ ಬಗ್ಗೆ ಮಾತನಾಡಬಹುದು ಎಂದು ಜನರೂ ಕೂಡ ತಿಳಿಸಬಹುದು. ಅದಕ್ಕೆ ಸಂಬಂಧಪಟ್ಟಂತೆ ಜೂ.11ರಿಂದ 26ರ ವರೆಗೆ ದೂರವಾಣಿ ಸಂಖ್ಯೆ 1800-11-7800ಗೆ ಕರೆ ಮಾಡಬಹುದು. ಅಥವಾ ಮೈ ಗವ್​ (MyGov) ವೇದಿಕೆಯಲ್ಲೂ ತಿಳಿಸಬಹುದು ಎಂದು ದೇಶದ ಅಭಿವೃದ್ಧಿ ಹಾಗೂ ಬೆಳವಣಿಗೆಗಾಗಿ ನಾಗರಿಕರು ಹಾಗೂ ಕೇಂದ್ರ ಸರಕಾರದ ನಡುವೆ ಸಂಪರ್ಕ ಮಾಡಬಹುದಾದ ಸಾಮಾಜಿಕ ಜಾಲತಾಣದ ವೇದಿಕೆಯಾಗಿರುವ ”ಮೈ ಗವ್‌’ ವೇದಿಕೆ ಟ್ವೀಟ್​ ಮಾಡಿ ತಿಳಿಸಿದೆ.

PM Modi,Man Ki Baath,radio-programme

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ