![DVS-suresh-prahlad](http://kannada.vartamitra.com/wp-content/uploads/2019/06/DVS-suresh-prahlad-678x376.jpg)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ರಾಜ್ಯದ ಮೂವರು ಮಂತ್ರಿಗಳಿಗೆ ಚಾಟಿಬೀಸಿದ್ದಾರೆ. ಸಚಿವರಾದ ಡಿವಿ ಸದಾನಂದ ಗೌಡ, ಪ್ರಹ್ಲಾದ್ ಜೋಶಿ ಹಾಗೂ ಸುರೇಶ್ ಅಂಗಡಿಗೆ ಮೋದಿ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಸಚಿವ ಸ್ಥಾನ ನೀಡುವ ಮೊದಲು ಮಾದ್ಯಮಗಳಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಸಂಸದೀಯ ಮಂಡಳಿ ಸಭೆಯಲ್ಲಿ ಮೋದಿ ಮೂವರು ಸಚಿವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಪ್ರಮಾಣವಚನಕ್ಕೂ ಮೊದಲೇ ಈ ಮೂವರು `ನಮಗೆ ಸಚಿವ ಸ್ಥಾನ ಕೊಡ್ತಿದ್ದಾರೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು. ಈ ವಿಚಾರ ಮೋದಿಯವರ ಗಮನಕ್ಕೆ ಬಂದಿದ್ದು, ಪ್ರಮಾಣ ವಚನದಂದೇ ನಡೆದ ಸಭೆಯಲ್ಲಿ ಮೂವರಿಗೆ ಪಾಠ ಮಾಡಿದ್ದಾರೆ.
ನನ್ನ ಸಲಹೆಯನ್ನು ಯಾಕೆ ಪಾಲಿಸಿಲ್ಲ ಎಂದು ಮೂವರನ್ನೂ ಮೋದಿ ಪ್ರಶ್ನಿಸಿದ್ದಾರೆ. ಅಲ್ಲದೆ, ಕೆಲವು ಸಚಿವರಿಗೆ ದಿನಾ ಬೆಳಗ್ಗೆದ್ದು ದೇಶವನ್ನುದ್ದೇಶಿಸಿ ಮಾತಾಡುವ ಖಯಾಲಿ ಇದೆ. ಮೊದಲು ಅಧಿಕಾರ ಸ್ವೀಕರಿಸಿ, ನಿಮ್ಮ ಸಚಿವಾಲಯದ ಬಗ್ಗೆ ತಿಳಿದುಕೊಳ್ಳಿ. ಆಮೇಲೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡಿ ಎಂದು ಪ್ರಮಾಣವಚನಕ್ಕೂ ಮೊದಲು ಸಂಜೆ 5 ಗಂಟೆಗೆ ನಡೆದಿದ್ದ ಹೊಸ ಸಚಿವರ ಸಭೆಯಲ್ಲಿ ಮೋದಿ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
PM Modi,D V Sadanandagowda,suresh angadi,prahlad joshi