ತೆಲಂಗಾಣದ ಜನತೆ ಮೋದಿ, ಕೆಸಿಆರ್, ಒವೈಸಿ ಮಾತುಗಳಿಗೆ ಮರುಳಾಗಬಾರದು: ರಾಹುಲ್ ಗಾಂಧಿ ಮನವಿ

ಹೈದರಾಬಾದ್: ಜನತೆ ಪ್ರಧಾನಿ ನರೇಂದ್ರ ಮೋದಿ, ಟಿ ಆರ್ ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ್ ಹಾಗೂ ಎಐಎಂಐಎಂ ಮುಖಂಡ ಅಸಾದುದ್ದೀನ್ ಒವೈಸಿ ಅವರ ಮಾತುಗಳಿಗೆ ಮರುಳಾಗಬಾರದು, ಈ ಮೂಲರೂ ನಾಯಕರು ಒಂದೇ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಈ ಕುರಿತಿ ಟ್ವಿಟರ್ ನಲ್ಲಿ ಮನವಿ ಮಾಡಿರುವ ರಾಹುಲ್ ಗಾಂಧಿ, ಟಿಆರ್ ಎಸ್ ಬಿಜೆಪಿಯ ಬಿ ಟೀಮ್ , ಓವೈಸಿಯ ಎಐಎಂಐಎಂ ಬಿಜೆಪಿಯ ಸಿ ಟೀಮ್ ನಂತಿದ್ದು, ಬಿಜೆಪಿ ಹಾಗೂ ಕೆಸಿಆರ್ ವಿರುದ್ಧದ ಮತಗಳನ್ನು ವಿಭಜಿಸಲಿದೆ ಎಂದು ಹೇಳಿದ್ದಾರೆ.

ಟಿಆರ್ ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್, ಪ್ರಧಾನಿ ಮೋದಿ ಅವರ ತೆಲಂಗಾಣ ರಬ್ಬರ್ ಸ್ಟಾಂಪ್ ನಂತೆ ಕಾರ್ಯನಿರ್ವಹಿಸುತ್ತಿದ್ದು, ಪ್ರಬುದ್ಧ ತೆಲಂಗಾಣದ ಜನತೆ ಅವರಿಂದ ಮರುಳಾಗಬಾರದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದಕ್ಕೂ ಮುಂಚೆ ಮತ್ತೊಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಮಹಾನ್ ಕನಸು ಹಾಗೂ ಆದರ್ಶದೊಂದಿಗೆ ತೆಲಂಗಾಣ ರಾಜ್ಯ ಉದಯವಾಗಿದೆ. ಆದರೆ, ನಾಲ್ಕು ವರ್ಷಗಳ ಕಾಲ ಆಡಳಿತ ನಡೆಸಿದ ಟಿಆರ್ ಎಸ್ ಭ್ರಷ್ಟಾಚಾರ, ದಬ್ಬಾಳಿಕೆಯಿಂದ ಆಡಳಿತ ನಡೆಸಿದೆ. ಇದಕ್ಕೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Telangana election,PM Modi, KCR, Owaisi,Rahul gandhi

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ