ಶಾ – ಗೃಹ, ನಿರ್ಮಲಾ – ಹಣಕಾಸು, ಸದಾನಂದ ಗೌಡ – ರಸಗೊಬ್ಬರ, ಜೋಶಿ – ಸಂಸದೀಯ ವ್ಯವಹಾರ

ನವದೆಹಲಿನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ನೆನ್ನೆ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರೊಂದಿಗೆ 57 ಮಂದಿ ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರು. ಇಂದು ನಡೆದ ಮೊದಲ ಸಚಿವ ಸಂಪುಟ ಸಭೆಯ ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.

ಅಮಿತ್​ ಶಾ ಅವರಿಗೆ ಗೃಹ ಖಾತೆಯನ್ನು ನೀಡಲಾಗಿದೆ. ರಾಜನಾಥ್​ ಸಿಂಗ್​ ಅವರಿಗೆ ರಕ್ಷಣಾ ಖಾತೆಯ ಜವಾಬ್ದಾರಿ ವಹಿಸಲಾಗಿದೆ. ನಿರ್ಮಲಾ ಸೀತಾರಾಮನ್​ಗೆ ಹಣಕಾಸು,  ಪಿಯೂಷ್​ ಗೋಯೆಲ್​ ರೈಲ್ವೆ, ಎಸ್​. ಜೈಶಂಕರ್ ವಿದೇಶಾಂಗ ಇಲಾಖೆಯ ಜವಾಬ್ದಾರಿ ನೀಡಲಾಗಿದೆ.

ಯಾರಿಗೆ ಯಾವ ಖಾತೆ:

  • ಅಮಿತ್ ಷಾ- ಗೃಹ ಇಲಾಖೆ
  • ರಾಜ್​ನಾಥ್ ಸಿಂಗ್ – ರಕ್ಷಣಾ ಇಲಾಖೆ, ಕಾರ್ಪೊರೇಟ್​ ಅಫೇರ್ಸ್​
  • ನಿರ್ಮಲಾ ಸೀತಾರಾಮನ್- ಹಣಕಾಸು ಇಲಾಖೆ
  • ಪಿಯೂಷ್ ಗೋಯಲ್- ರೈಲ್ವೇ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕೆ
  • ಎಸ್.ಜೈಶಂಕರ್- ವಿದೇಶಾಂಗ ಇಲಾಖೆ
  • ಡಿ.ವಿ.ಸದಾನಂದಗೌಡ- ರಾಸಾಯನಿಕ, ರಸಗೊಬ್ಬರ ಇಲಾಖೆ
  • ಡಾ.ಹರ್ಷವರ್ಧನ್- ಆರೋಗ್ಯ ಇಲಾಖೆ
  • ಪ್ರಕಾಶ್ ಜಾವ್ಡೇಕರ್- ಪರಿಸರ ಇಲಾಖೆ
  • ನಿತಿನ್ ಗಡ್ಕರಿ- ಭೂಸಾರಿಗೆ, ಹೆದ್ದಾರಿ
  • ಸದಾನಂದ ಗೌಡ- ರಾಸಾಯನಿಕ ಮತ್ತು ರಸಗೊಬ್ಬರ
  • ರಾಮ್ ವಿಲಾಸ್ ಪಾಸ್ವಾನ್ – ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು
  • ನರೇಂದ್ರ ಸಿಂಗ್ ತೋಮರ್ – ಕೃಷಿ, ರೈತ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​
  • ಥಾವರ್ ಚಾಂದ್ ಗೆಹ್ಲೋಟ್- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ
  • ಎಸ್.ಜೈಶಂಕರ್- ವಿದೇಶಾಂಗ ಇಲಾಖೆ
  • ರಮೇಶ್ ಪೋಕ್ರಿಯಾಲ್ – ಮಾನವ ಸಂಪನ್ಮೂಲ ಅಭಿವೃದ್ಧಿ
  • ಅರ್ಜುನ್ ಮುಂಡಾ – ಬುಡಕಟ್ಟು ವ್ಯವಹಾರಗಳ ಖಾತೆಹರ್ಸಿಮ್ರತ್ ಕೌರ್ ಬಾದಲ್ – ಆಹಾರ ಸಂಸ್ಕರಣ
  • ರವಿಶಂಕರ್ ಪ್ರಸಾದ್ – ಕಾನೂನು, ಸಂವಹನ, ಐಟಿ
  • ಸ್ಮೃತಿ ಇರಾನಿ – ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಟೆಕ್ಸ್​ಟೈಲ್ಸ್​
  • ಹರ್ಷವರ್ಧನ್ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ, ಭೂವಿಜ್ಞಾನ
  • ಪ್ರಕಾಶ್ ಜಾವ್ಡೇಕರ್ – ಪರಿಸರ, ಅರಣ್ಯ, ಹವಾಮಾನ ಮತ್ತು ವಾರ್ತಾ ಇಲಾಖೆ
  • ಧರ್ಮೇಂದ್ರ ಪ್ರಧಾನ್ – ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಉಕ್ಕು
  • ಮುಖ್ತಾರ್ ಅಬ್ಬಾಸ್ ನಖ್ವಿ – ಅಲ್ಪಸಂಖ್ಯಾತ ವ್ಯವಹಾರಗಳು
  • ಪ್ರಹ್ಲಾದ್ ಜೋಶಿ – ಸಂಸದೀಯ ವ್ಯವಹರಾಗಳು, ಕಲ್ಲಿದ್ದಲು ಮತ್ತು ಗಣಿಗಾರಿಕೆ
  • ಮಹೇಂದ್ರನಾಥ್ ಪಾಂಡೆ – ಕೌಶಲಾಭಿವೃದ್ಧಿ, ಉದ್ಯಮಶೀಲತೆ
  • ಅರವಿಂದ್ ಗಣಪತ್ ಸಾವಂತ್ – ಬೃಹತ್​ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ
  • ಗಿರಿರಾಜ್​ ಸಿಂಗ್ – ಪಶುಪಾಲನೆ, ಹೈನುಗಾರಿಕೆ, ಮೀನುಗಾರಿಕೆ
  • ಗಜೇಂದ್ರ ಸಿಂಗ್ ಶೇಖಾವತ್ – ಜಲಶಕ್ತಿ
  • ಫಗನ್ ಸಿಂಗ್ ಕುಲಸ್ತೆ – ಉಕ್ಕಿನ ಇಲಾಖೆ ರಾಜ್ಯ ಖಾತೆ
  • ಅಶ್ವಿನ್ ಕುಮಾರ್ ಚುಬೆ – ಆರೋಗ್ಯ ಮತ್ತು ಕುಟುಂಬ ಕಲ್ಯಾಣ (ರಾಜ್ಯ ಖಾತೆ)
  • ಅರ್ಜುನ್ ರಾಮ್ ಮೇಘವಾಲ್ – ಸಂಸದೀಯ ವ್ಯವಹಾರಗಳು, ಬೃಹತ್​ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ (ರಾಜ್ಯ ಖಾತೆ)
  • ವಿ.ಕೆ.ಸಿಂಗ್ – ಭೂಸಾರಿಗೆ ಮತ್ತು ಹೆದ್ದಾರಿ (ರಾಜ್ಯ ಖಾತೆ)
  • ಕೃಷ್ಣ ಪಾಲ್ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ (ರಾಜ್ಯ ಖಾತೆ)
  • ದಾನ್ವೆ ರಾವ್ ಸಾಹೇಬ್ ದಾದಾರಾವ್ – ಗ್ರಾಹಕ ಸೇವೆ ಮತ್ತು ಆಹಾರ ಮತ್ತು ನಾಗರಿಕ ಸೌಲಭ್ಯ (ರಾಜ್ಯ ಖಾತೆ)
  • ಜಿ.ಕೃಷ್ಣ ರೆಡ್ಡಿ – ಗೃಹ (ರಾಜ್ಯ ಖಾತೆ)
  • ಪುರುಷೋತ್ತಮ್ ರೂಪಾಲ್ – ಕೃಷಿ ಮತ್ತು ರೈತ ಕಲ್ಯಾಣ (ರಾಜ್ಯ ಖಾತೆ)
  • ರಾಮ್ ದಾಸ್ ಅಠಾವಳೆ – ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ (ರಾಜ್ಯ ಖಾತೆ)
  • ಸಾಧ್ವಿ ನಿರಂಜನ್ ಜ್ಯೋತಿ – ಗ್ರಾಮೀಣಾಭಿವೃದ್ಧಿ (ರಾಜ್ಯ ಖಾತೆ)
  • ಬಾಬುಲ್ ಸುಪ್ರಿಯೋ – ಪರಿಸರ, ಅರಣ್ಯ ಮತ್ತು ಹವಾಮಾನ (ರಾಜ್ಯ ಖಾತೆ)
  • ಸಂಜೀವ್ ಕುಮಾರ್ ಬಾಲ್ಯಾನ್ – ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ (ರಾಜ್ಯಖಾತೆ)
  • ಧೋತ್ರೆ ಸಂಜಯ್ ಶ್ಯಾಮ್ ರಾಮ್ – ಮಾನವ ಸಂಪನ್ಮೂಲಾಭಿವೃದ್ಧಿ, ಸಂವಹನ, ಐಟಿ, (ರಾಜ್ಯ ಖಾತೆ)
  • ಅನುರಾಗ್ ಸಿಂಗ್ ಠಾಕೂರ್ – ಹಣಕಾಸು, ಕಾರ್ಪೊರೇಟ್​ ವ್ಯವಹರಾಗಳು (ರಾಜ್ಯ ಖಾತೆ)
  • ಸುರೇಶ್ ಅಂಗಡಿ – ರೈಲ್ವೇ (ರಾಜ್ಯ ಖಾತೆ)
  • ನಿತ್ಯಾನಂದ್ ರಾಯ್ – ಗೃಹ (ರಾಜ್ಯ ಖಾತೆ)
  • ರತನ್ ಲಾಲ್ ಕಠಾರಿಯಾ – ಜಲಶಕ್ತಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ (ರಾಜ್ಯ ಖಾತೆ)
  • ವಿ.ಮುರಳೀಧರನ್ – ವಿದೇಶಾಂಗ ವ್ಯವಹಾರಗಳು ಮತ್ತು ಸಂಸದೀಯ ವ್ಯವಹಾರಗಳು (ರಾಜ್ಯ ಖಾತೆ)
  • ರೇಣುಕಾ ಸಿಂಗ್ ಸರೂಟಾ – ಬುಡಕಟ್ಟು ವ್ಯವಹಾರಗಳು (ರಾಜ್ಯ ಖಾತೆ)
  • ಸೋಮ್ ಪ್ರಕಾಶ್ – ವಾಣಿಜ್ಯ ಮತ್ತು ಕೈಗಾರಿಕೆ (ರಾಜ್ಯ ಖಾತೆ)
  • ರಾಮೇಶ್ವರ್ ಥಾಲಿ – ಆಹಾರ ಸಂಸ್ಕರಣೆ (ರಾಜ್ಯ ಖಾತೆ)
  • ಪ್ರತಾಪ ಚಂದ್ರ ಸಾರಂಗಿ – ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಪಶುಸಂಗೋಪನೆ,
  • ಹೈನುಗಾರಿಕೆ, ಮೀನುಗಾರಿಕೆ (ರಾಜ್ಯ ಖಾತೆ)
  • ಕೈಲಾಶ್ ಚೌಧರಿ – ಕೃಷಿ ಮತ್ತು ರೈತೋಪಯೋಗಿ (ರಾಜ್ಯ ಖಾತೆ)
  • ದೇಬೊಶ್ರೀ ಚೌಧರಿ – ಮಹಿಳಾ ಮತ್ತು ಮಕ್ಕಳ ಕಲ್ಯಾಣ (ರಾಜ್ಯ ಖಾತೆ)
  • ಸಂತೋಷ್ ಗಂಗ್ವಾರ್ – ಕಾರ್ಮಿಕ ಮತ್ತು ಉದ್ಯೋಗ (ಸ್ವತಂತ್ರ ಖಾತೆ)
  • ರಾವ್ ಇಂದ್ರಜಿತ್ ಸಿಂಗ್ – ಸಂಖ್ಯಾಶಾಸ್ತ್ರ, ಯೋಜನಾ ಅನುಷ್ಠಾನ (ಸ್ವತಂತ್ರ)
  • ಶ್ರೀಪಾದ್ ನಾಯ್ಕ್ – ಆಯುರ್ವೇದ, ಯೋಗ, ನ್ಯಾಚುರೋಪತಿ, ಆಯುಷ್​ (ಸ್ವತಂತ್ರ), ರಕ್ಷಣಾ ಇಲಾಖೆ (ರಾಜ್ಯ)
  • ಡಾ.ಜಿತೇಂದ್ರ ಸಿಂಗ್ – ಈಶಾನ್ಯ ಪ್ರದೇಶ (ಸ್ವತಂತ್ರ), ಪ್ರಧಾನ ಮಂತ್ರಿಗಳ ಸಚಿವಾಲಯ, ಸಿಬ್ಬಂದಿ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (ರಾಜ್ಯ ಖಾತೆ)
  • ಕಿರಣ್ ರಿಜಿಜು – ಯುವಜನ ಸಬಲೀಕರಣ ಮತ್ತು ಕ್ರೀಡೆ (ಸ್ವತಂತ್ರ), ಅಲ್ಪಸಂಖ್ಯಾತ ವ್ಯವಹಾರಗಳು (ರಾಜ್ಯ)
  • ಪ್ರಹ್ಲಾದ್ ಪಟೇಲ್ – ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ (ಸ್ವತಂತ್ರ, ರಾಜ್ಯ)
  • ರಾಜ್ ಕುಮಾರ್ – ಇಂಧನ (ಸ್ವತಂತ್ರ)
  • ಹರ್ದೀಪ್ ಸಿಂಗ್ ಪುರಿ – ವಸತಿ ಮತ್ತು ನಗರಾಭಿವೃದ್ಧಿ (ಸ್ವತಂತ್ರ), ವಾಣಿಜ್ಯ ಮತ್ತು ಕೈಗಾರಿಕೆ (ರಾಜ್ಯ ಖಾತೆ)
  • ಮನ್ ಸುಖ್ ಲಾಲ್ ಮಾಂಡವ್ಯ – ಶಿಪ್ಪಿಂಗ್​ (ಸ್ವತಂತ್ರ), ರಾಸಾಯನಿಕ ಮತ್ತು ರಸಗೊಬ್ಬರ (ರಾಜ್ಯ ಖಾತೆ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ