ಮುಂಬೈ: ಭಯೋತ್ಪಾದನೆಗೆ ಬೆಂಬಲ ನೀಡುವ ಪಾಕಿಸ್ತಾನವನ್ನು ಕ್ರಿಕೆಟ್ ನಿಂದ ದೂರವಿಡಬೇಕೆಂಬ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಆಡಳಿತಗಾರರ ಸಮಿತಿಯ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ತಿರಸ್ಕರಿಸಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಬಿಸಿಸಿಐನ ಆಡಳಿತಗಾರರ ಸಮಿತಿ ಮಾ.7ರಂದು ಮುಂಬೈನಲ್ಲಿ ಸಭೆ ಸೇರಲಿದೆ.
ಯಾವುದೇ ರಾಷ್ಟ್ರದ ಹೆಸರನ್ನು ಪ್ರಸ್ತಾಪಿಸದೆ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ, ಉಗ್ರರ ಸುರಕ್ಷಿತ ಅಡಗುದಾಣವಾಗಿ ಮಾರ್ಪಟ್ಟಿರುವ ರಾಷ್ಟ್ರದ ಜತೆ ಕ್ರಿಕೆಟ್ ಸಂಬಂಧವನ್ನು ಕಡಿದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡು ಐಸಿಸಿ ಸೇರಿ ಕ್ರಿಕೆಟ್ ಆಡುವ ರಾಷ್ಟ್ರಗಳ ಮಂಡಳಿಗಳಿಗೆ ಬಿಸಿಸಿಐ ಪತ್ರ ಬರೆದಿತ್ತು.
ಆದರೆ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಷ್ಟ್ರದೊಂದಿಗೆ ಕ್ರಿಕೆಟ್ ನಂಟು ಕಡಿದುಕೊಳ್ಳುವಂತ ಯಾವುದೇ ನೀತಿ ನಿಯಮಗಳನ್ನು ಐಸಿಸಿ ಹೊಂದಿಲ್ಲ. ಇದು ಆಯಾ ರಾಷ್ಟ್ರಗಳಿಗೆ ಬಿಟ್ಟ ವಿಚಾರ ಎಂದು ಹೇಳಿದ್ದ ಐಸಿಸಿ, ಬಿಸಿಸಿಐನ ಮನವಿಯನ್ನು ತಿರಸ್ಕರಿಸಿತ್ತು. ಈ ನಿಟ್ಟಿನಲ್ಲಿ ಬಿಸ್ಸಿಐಗೆ ಭಾರೀ ಹಿನ್ನಡೆಯಾಗಿದ್ದು, ಮುಂದಿನ ನಿರ್ಧಾರಗಳಬಗ್ಗೆ ಚರ್ಚೆ ನಡೆಸಲು ನಿರ್ಧರಿಸಿದೆ.
BCCI,meeting,on-march 7th