ವಿಕೆಟ್ ಪಡೆದು ಸಂಭ್ರಮಿಸಲು ಹೋಗಿ ಕತ್ತು ಉಳುಕಿಸಿಕೊಂಡು ಅಪಹಾಸ್ಯಕ್ಕೀಡಾದ ಪಾಕ್ ಕ್ರಿಕೆಟಿಗ!

ಹರಾರೆ: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗಿ ಹಸನ್ ಅಲಿ ವಿಕೆಟ್ ಕಿತ್ತ ಖುಷಿಯನ್ನು ಸಂಭ್ರಮಿಸಲು ಹೋಗಿ ಕತ್ತು ಉಳುಕಿಸಿಕೊಂಡು ಅಪಹಾಸ್ಯಕ್ಕೀಡಾದ ಘಟನೆ ನಡೆದಿದೆ.
ಸದ್ಯ ಪಾಕಿಸ್ತಾನ ಜಿಂಬಾಬ್ವೆ ಪ್ರವಾಸದಲ್ಲಿದೆ. ಬುಲವಾಯೋ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ವೇಗಿ ಹಸನ್ ಅಲಿ ಜಿಂಬಾಬ್ವೆ ತಂಡದ ರಯಾನ್ ಮುರ್ರೆ ವಿಕೆಟ್ ಕಿತ್ತು ಸಂಭ್ರಮಾಚರಣೆಯ ವೇಳೆ ಕುತ್ತಿಗೆಗೆ ತೀವ್ರವಾಗಿ ಗಾಯಮಾಡಿಕೊಂಡಿದ್ದಾರೆ.
ವೇಗಿ ಹಸನ್ ಅಲಿ ಕ್ರೀಡಾಂಗಣದಲ್ಲಿ ಕ್ರೀಡಾ ಸ್ಪೂರ್ತಿ ಮರೆತು ವರ್ತಿಸುವುದಕ್ಕೆ ಹೆಸರುವಾಸಿ. ಕೇವಲ ವಿಕೆಟ್ ಪಡೆದಿದ್ದಕ್ಕೆ ರೋಷಾವೇಷದಲ್ಲಿ ವರ್ತಿಸಿದ್ದರ ಪರಿಣಾಮ ಕತ್ತು ಉಳುಕಿಸಿಕೊಂಡಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು ಟ್ವೀಟರಿಗರು ಹಾಸ್ಯಾತ್ಮಕ ಟ್ವೀಟ್ ಗಳನ್ನು ಮಾಡುತ್ತಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ