
ವಿಜಯಪುರ: ಆಪರೇಷನ್ ಕಮಲ ಮಾಡುವುದಾಗಿ ನಾನು ಹೇಳಿಲ್ಲ. ನಮ್ಮ ನಾಯಕರೂ ಹೇಳಿಲ್ಲ. ಕಾಂಗ್ರೆಸ್-ಜೆಡಿಎಸ್ ಸರ್ಕಾರ ಕಚ್ಚಾಡಿಕೊಂಡು ಬಿದ್ದರೆ ಮುಂದೆ ಯೋಚಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿ, ಯಾವುದೇ ಕಾರಣಕ್ಕೂ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೆಳೆಯುವ ಯತ್ನ ಮಾಡುವುದಿಲ್ಲ. ಪರಸ್ಥಿತಿ ಬಂದಾಗ ರಾಜಕೀಯ ಏರು ಪೇರಾದಾಗ ಕುಳಿತು ಚರ್ಚೆ ಮಾಡುತ್ತೇವೆ. ಒಂದು ವೇಳೆ ಅವರೇ ನಮ್ಮ ಬಳಿ ಬಂದರೆ ಎಂಬ ಪ್ರಶ್ನೆಗೆ ಎಂಬುದಕ್ಕೆ ನಾನು ಉತ್ತರಿಸುವುದಿಲ್ಲ ಎಂದರು.
ಮೈತ್ರಿ ಸರ್ಕಾರದ ಕಚ್ಚಾಟದಿಂದ ಜನ ಬೇಸರಗೊಂಡಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ರಾಜ್ಯದ ಬರಗಾಲದ ಬಗ್ಗೆ ನಾವು ವಿಸ್ತಾರವಾದ ಚರ್ಚೆ ಮಾಡಿ ರಾಜ್ಯದ ಗಮನ ಸೆಳೆದಿದ್ದೇವೆ. ಅಧಿವೇಶನದಲ್ಲಿ ಬರಗಾಲ ಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಬೇಕಿತ್ತು ಎಂದರು.
ಸಂಪುಟ ವಿಸ್ತರಣೆ ಕಚ್ಚಾಟದಲ್ಲಿ ರಾಜ್ಯದ ಅಭಿವೃದ್ಧಿ ಹಿನ್ನೆಡೆಯಾಗುತ್ತೆ. ಮೈತ್ರಿ ಸರ್ಕಾರದ ಕಚ್ಚಾಟದಿಂದ ಜನ ಬೇಸತ್ತಿದ್ದಾರೆ. ಇದು ನಾಡಿನ ಜನರಿಗೆ ಮಾಡಿದ ದ್ರೋಹ. ಈಗಲಾದರೂ ರಾಜ್ಯದ ಅಭಿವೃದ್ಧಿ ಬಗ್ಗೆ ಸರ್ಕಾರ ಚರ್ಚಿಸಬೇಕು.ಮಂತ್ರಿ ಪಟ್ಟ ಯಾರಿಗಾದರೂ ಕೊಡಲಿ, ಇದರ ಕಿತ್ತಾಟದಲ್ಲಿ ರಾಜ್ಯ ಅಭಿವೃದ್ಧಿ ಹಿನ್ನಡೆಯಾಗುತ್ತೆ ಎಂಬ ನೋವು ನಮಗಿದೆ. ಸಮ್ಮಿಶ್ರ ಸರ್ಕಾರಕ್ಕೆ ಯಾರ ಧ್ವನಿಯೂ ಕೇಳಿಸಿಕೊಳ್ಳುವ ಕಿವಿ ಇಲ್ಲ. ಅವರದ್ದೇ ಆದ ಅರಾಜಕತೆ, ಜಂಜಾಟದಲ್ಲಿ ತಲ್ಲೀನರಾಗಿದ್ದಾರೆ ಎಂದರು.
Vijayapura,BJP,B S Yedyurappa