ಐಸಿಸ್ ಅಡಗು ತಾಣಗಳ ಮೇಲೆ ಎನ್ ಐ ಎ ಕಾರಾಚರಣೆಗೆ ರಾಜನಾಥ್ ಸಿಂಗ್ ಸೇರಿ ಹಲವು ಕೇಂದ್ರ ಸಚಿವರ ಶ್ಲಾಘನೆ

ನವದೆಹಲಿ: ಪಾಕಿಸ್ತಾನ ಮೂಲಕ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆಯ ಅಡಗು ತಾಣಗಳ ಮೇಲೆ ರಾಷ್ಟ್ರೀಯ ತನಿಖಾ ದಳ ನಡೆಸಿರುವ ಭಾರೀ ಕಾರ್ಯಾಚರಣೆಯನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಶ್ಲಾಘಿಸಿದ್ದಾರೆ.

ದೆಹಲಿ ಹಾಗೂ ಉತ್ತರಪ್ರದೇಶದಲ್ಲಿದ್ದ ಐಸಿಸ್ ಅಡಗುತಾಣಗಳ ಮೇಲೆ ಎನ್ಐಎ ದಾಳಿ ನಡೆಸಿದ್ದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಐಸಿಸ್ ಅಡಗುತಾಣಗಳ ಮೇಲಿನ ದಾಳಿ ದೊಡ್ಡ ಯಶಸ್ಸಿಗೆ ಪ್ರೇರಣೆಯಾಗಿದೆ ಎಂದು ಎನ್ ಐಎ ಅಧಿಕಾರಿಗಳ ಕಾರ್ಯವನ್ನು ಕೊಂಡಾಡಿದರು.

ಇದೇ ವೇಳೆ ವಿತ್ತ ಸಚಿವ ಅರುಣ್ ಜೇಟ್ಲಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಅತ್ಯಂತ ಭಯಾನಕ ಉಗ್ರ ಸಂಘಟನೆಯ ಅಡಗುತಾಣಗಳ ಮೇಲೆ ಎನ್ಐಎ ದಾಳಿ ನಡೆಸಿದ್ದು, ಎನ್ಐಎ ಕಾರ್ಯಾಚರಣೆ ಪ್ರಶಂಸನೀಯವಾದದ್ದು ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಮಾತನಾಡಿ, ಉಗ್ರರ ಅಡಗುತಾಣಗಳ ಮೇಲಿನ ದಾಳಿ ದೊಡ್ಡ ಸಾಧನೆ, ಯಶಸ್ಸನ್ನು ತಂದಿದೆ. ಎನ್ಐಎ ಅತ್ಯುತ್ತಮ ಕಾರ್ಯ ಮಾಡಿದೆ. ಎನ್ಐಎ ವೃತ್ತಿಪರ ಸಂಘಟನೆ, ರಚನೆಗೊಂಡಾಗಿನಿಂದಲೂ ಎನ್ಐಎ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಲೇ ಇದೆ. ಘಟನೆ ಸಂಭವಿಸುವುದಕ್ಕೂ ಮುನ್ನ ಅದರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ISIS,NIA,Rajnath singh

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ