ಜೈಪುರ್: ರಾಜಸ್ತಾನ ವಿಧಾನಸಭೆ ಚುವಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನಲೆಯಲ್ಲಿ ರಾಜಕೀಯ ಪಕ್ಷಗಳ ಭರಾಟೆ ಪ್ರಚಾರವೂ ಹೆಚ್ಚಿದೆ. ಈ ನಡುವೆ ಕಾಂಗ್ರೆಸ್ ಇಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ.
ರಾಜಧಾನಿ ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜನ್ ಘೋಷಣಾ ಪತ್ರ ಶೀರ್ಷಿಕೆಯ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ರೈತರ ಸಾಲ ಮನ್ನಾ, ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ನಿರುದ್ಯೋಗಿಗಳಿಗೆ 3,500 ರೂ. ಮಾಸಿಕ ಭತ್ಯೆ ಹಾಗೂ ಹಿರಿಯ ಕೃಷಿಕರಿಗೆ ಪಿಂಚಣಿ ಇವುಗಳು ಪ್ರಣಾಳಿಕೆಯಲ್ಲಿರುವ ಮುಖ್ಯ ಅಂಶಗಳಾಗಿವೆ.
ಎಐಸಿಸಿ ಮಹಾ ಪ್ರಧಾನ ಕಾರ್ಯದರ್ಶಿ ಅವಿನಾಶ್ ಪಾಂಡೆ, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಚಿನ್ ಪೈಲೆಟ್, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಮತ್ತು ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಹರೀಶ್ ಚೌಧರಿ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.
rajasthan election,congress,manifesto