ರಾಮಮಂದಿರ ನಿರ್ಮಾಣಕ್ಕಾಗಿ ವಿಎಚ್‍ಪಿಯಿಂದ ಮತ್ತೊಂದು ಮಹತ್ವದ ಹೆಜ್ಜೆ

ಲಕ್ನೋ, ನ.29- ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಬೃಹತ್ ಧರ್ಮ ಸಭೆ ನಡೆಸಿ ಹಿಂದೂಗಳ ಶಕ್ತಿ ಪ್ರದರ್ಶಿಸಿದ್ದ ವಿಶ್ವ ಹಿಂದೂ ಪರಿಷತ್(ವಿಎಚ್‍ಪಿ) ಈಗ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಇನ್ನೂ ಒಂದು ಮಹತ್ವದ ಹೆಜ್ಜೆ ಇರಿಸಿದೆ.

ಅಯೋಧ್ಯೆಯಲ್ಲಿ ಶತಾಯ-ಗತಾಯ ರಾಮಮಂದಿರ ನಿರ್ಮಾಣಕ್ಕಾಗಿ ಜನರು ಪ್ರತಿಜ್ಞಾ ವಿಧಿ ಸ್ವೀಕರಿಸಲು ತಾನು ದೇಶಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಇಂದು ಘೋಷಿಸಿದೆ.

ಡಿ.18 ಗೀತ ಜಯಂತಿ ದಿನದಂದು ಈ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮಗಳನ್ನು ದೇಶಾದ್ಯಂತ ಒಂದು ವಾರ ನಡೆಸಲಾಗುವುದು ಎಂದು ವಿಎಚ್‍ಪಿಯ ಅವಧ್ ಪ್ರಾಂತ್ಯದ ಸಂಘಟನಾ ಕಾರ್ಯದರ್ಶಿ ಭೋಲೇಂದ್ರ ಹೇಳಿದ್ದಾರೆ.

ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಈ ಬಗ್ಗೆ ವಿವರ ನೀಡಿದ ಅವರು, ದೇಶಾದ್ಯಂತ ಪ್ರತಿಜ್ಞಾ ಸ್ವೀಕಾರ ಸಮಾರಂಭಗಳನ್ನು ನಡೆಸುವ ಜೊತೆಗೆ ವಿವಿಧ ಭಾಗಗಳಲ್ಲಿ ಪುಟ್ಟ ಧರ್ಮ ಸಭೆಗಳು(ಹೂಂಕಾರ ಸಮಾವೇಶ) ಸಹ ನಡೆಯಲಿವೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಇವುಗಳ ಮೂಲಕ ನಮ್ಮ ಹೋರಾಟ ಮತ್ತಷ್ಟು ತೀವ್ರವಾಗಲಿವೆ ಎಂದು ತಿಳಿಸಿದರು.

Ram Mandir,VHP, Dharma sabha

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ