
ಅಯೋಧ್ಯೆ: ಬಿಜೆಪಿ ನಾಯಕರು ಹಿಂದೂಗಳ ಭಾವನೆಗಳೊಂದಿಗೆ ಆಟವಾಡುತ್ತಿದ್ದಾರೆ. ಕೇಂದ್ರದ ಈ ನಡೆ ಸರಿಯಲ್ಲ ಎಂದಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ರಾಮ ಮಂದಿರ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿರುವಾಗ ಬಿಜೆಪಿ ಈ ವಿಚಾರನ್ನು ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಹಿಂದೂಗಳ ಭಾವನೆಯೊಂದಿಗೆ ಆಟವಾಡಬಾರದು ಎಂದು ತಿಳಿಸಿದ್ದಾರೆ.
ಅಯೋಧ್ಯಾ ರಾಮ ಲಲ್ಲಾ ಮಂದಿರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಅಯೋಧ್ಯೆ ವಿವಾದ ಸುಪ್ರೀಂಕೋರ್ಟ್ ನಲ್ಲಿಯೇ ಇತ್ಯರ್ಥಗೊಳ್ಳಲಿದೆ ಎಂಬುದೇ ಆದರೆ, ಅಯೋಧ್ಯೆ ವಿಚಾರ ಚುನಾವಣಾ ವಿಚಾರವಾಗಬಾರದು. ಬಿಜೆಪಿ ಹಿಂದೂಗಳ ಭಾವನೆಗಳೊಂದಿಗೆ ಆಟವಾಡಬಾರದು. ರಾಮ ಮಂದಿರ ನಿರ್ಮಾಣದ ಭರವಸೆಯು ಮತ್ತೊಂದು ಸುಳ್ಳು ಎಂಬುದನ್ನು ಜನರಿಗೆ ತಿಳಿಸಿ ಎಂದು ಹೇಳಿದ್ದಾರೆ.
ರಾಮ ಮಂದಿರ ವಿಚಾರ ಚುನಾವಣೆಯ ಗಿಮಿಕ್ ಆಗಿದೆಯೇ ಎಂಬುದರ ಕುರಿತಂತೆ ಬಿಜೆಪಿ ಜನರಿಗೆ ಸ್ಪಷ್ಟಪಡಿಸಬೇಕು. ನೀವು ಏನೂಬೇಕಾದರೂ ಮಾಡಬಹುದು. ತ್ರಿವಳಿ ತಲಾಕ್, ನೋಟು ಅಮಾನ್ಯೀಕರಣ ಮಾಡಿರುವಂತಹ ಸರ್ಕಾರ ಇದಕ್ಕೆಲ್ಲ ನ್ಯಾಯಾಲಯಕ್ಕೆ ಹೋಗಿರಲಿಲ್ಲ. ಹಾಗಾಗಿ ರಾಮಮಂದಿರ ನಿರ್ಮಾಣಕ್ಕೆ ಮುಂದಾಗದಿದ್ದರೆ ಅಧಿಕಾರದಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇನ್ನು ತಮ್ಮ ಅಯೋಧ್ಯೆ ಭೇಟಿಯ ಹಿಂದೆ ಯಾವುದೇ ಹಿಡನ್ ಅಜೆಂಡಾಗಳಿಲ್ಲ. ಇದನ್ನು ಸುಖಾಸುಮ್ಮನೆ 2019ರ ಸಾರ್ವತ್ರಿಕ ಚುನಾವಣೆಗೆ ತಳಕುಹಾಕಲಾಗುತ್ತಿದೆ ಎಂದರು.
ಅಯೋಧ್ಯೆಯಲ್ಲಿ ನಡೆಯುತ್ತಿರುವ ಧರ್ಮಸಭೆಯಲ್ಲಿ ಪಾಲ್ಗೊಳ್ಲುವ ನಿಟ್ಟಿನಲ್ಲಿ ಉದ್ಧವ್ ಠಾಕ್ರೆ ಇದೇ ಮೊದಲ ಬಾರಿಗೆ ಅಯೋಧ್ಯೆಗೆ ಆಗಮಿಸಿದ್ದಾರೆ.
Ram mandir,ayodhya,Uddhav Thackeray