ಥಾಣೆ: ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕೆ ಒತ್ತಡ ಹೆಚ್ಚುತ್ತಿರುವ ಬೆನ್ನಲ್ಲೇ ನ. 25ರಂದು ಶಿವಸೇನೆ ಮತ್ತು ವಿಶ್ವ ಹಿಂದು ಪರಿಷದ್ (ವಿಎಚ್ಪಿ) ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು, ಸಾವಿರಾರು ಶಿವ ಸೈನಿಕರು ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ್ದಾರೆ.
ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ ವಿಶೇಷ ರೈಲಿಗೆ ಥಾಣೆ ಮೇಯರ್ ಮೀನಾಕ್ಷಿ ಸಿಂಧೆ ಆರತಿ ಬೆಳಗಿ ಚಾಲನೆ ನೀಡಿದರು. ಕೇಸರಿ ಧರಿಸಿದ್ದ 2 ಸಾವಿರಕ್ಕೂ ಅಧಿಕ ಶಿವ ಸೈನಿಕರು, ‘ಜೈ ಶ್ರೀ ರಾಮ್’, ‘ಮೊದಲು ಮಂದಿರ ಆಮೇಲೆ ಸರಕಾರ’, ‘ನಡೆಯಿರಿ ಅಯೋಧ್ಯೆಗೆ’ ಎಂಬ ಘೋಷವಾಕ್ಯದೊಂದಿಗೆ ಅಯೋಧ್ಯೆಯತ್ತ ಸಾಗಿದ್ದಾರೆ.
ಈ ವೇಳೆ ಮಾತನಾಡಿದ ಶಿವಸೇನೆ ಕಾರ್ಪೋರೇಟರ್ ಸರೇಶ್ ಮಸ್ಕೆ ರಾಮ ಮಂದಿರ ನಿರ್ಮಾಣದ ಭರವಸೆಗಳನ್ನು ಕೇಳುತ್ತಲೇ ಬಂದಿದ್ದೇವೆ. ಆದರೆ, ಇಲ್ಲಿಯವರೆಗೂ ಮಂದಿರ ನಿರ್ಮಾಣವಾಗಿಲ್ಲ. ಭಗವಾನ್ ಶ್ರೀ ರಾಮನ ಮಂದಿರ ನಿರ್ಮಾಣಕ್ಕೆ ಈಗ ಸಕಾಲ ಕೂಡಿ ಬಂದಿದೆ ಎಂದು ಹೇಳಿದ್ದಾರೆ.
ಇಂದು ರಾತ್ರಿ ಅಯೋಧ್ಯೆ ತಲುಪಲಿರುವ ಶಿವ ಸೈನಿಕರು, ಶನಿವಾರ ಸಂಜೆ ನಯಾ ಘಾಟ್ನಲ್ಲಿ ಆಯೋಜಿಸಲಾಗಿರುವ ಮಹಾ ಆರತಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
shiv sainika,,ram mandir,ayodhya,special train,Lok Sabha elections