ಅಖಂಡ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾನವಾಗಬೇಕು: ಧರ್ಮಸಭೆಯಲ್ಲಿ ಒತ್ತಾಯ

ಅಯೋಧ್ಯಾ: ಐತಿಹಾಸಿಕ ನಗರ ಅಯೋಧ್ಯೆಯಲ್ಲಿ ಭಾನುವಾರ ನಡೆದ ಧರ್ಮಸಂಸದ್​ನಲ್ಲಿ ರಾಮಮಂದಿರ ನಿರ್ಮಾಣದ ಕಹಳೆ ಮೊಳಗಿದ್ದು, ರಾಮ ಜನ್ಮಭೂಮಿಯನ್ನು ಅಖಂಡವಾಗಿ ಹಿಂದುಗಳಿಗೆ ನೀಡುವಂತೆ ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ. ಮುಸ್ಲಿಮರು ಭೂಮಿಯನ್ನು ಹಿಂದುಗಳಿಗೆ ಹಸ್ತಾಂತರ ಮಾಡಬೇಕು. ಅಖಂಡ ಜಾಗದಲ್ಲಿ ರಾಮಮಂದಿರ ನಿರ್ವಣಕ್ಕೆ ಅವಕಾಶ ನೀಡಬೇಕು. ಈ ಕುರಿತು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಆದೇಶ ಹೊರಡಿಸಬೇಕು ಎಂದು ಧರ್ಮಸಂಸದ್​ನಲ್ಲಿ ಸಾಧು-ಸಂತರು ನಿರ್ಣಯ ಕೈಗೊಂಡಿದ್ದಾರೆ.

ಹುಬ್ಬಳ್ಳಿ, ಮಂಗಳೂರು ಸಹಿತ ದೇಶದ 152 ನಗರಗಳಲ್ಲಿ ಜನಾಗ್ರಹ ಸಭೆ
ಅಂಬರೀಷ್ ನಿಧನ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾರ್ಯಕ್ರಮ ಮುಂದೂಡಿಕೆ
ಡಿ.9ರಂದು ದೆಹಲಿಯಲ್ಲಿ ಬೃಹತ್ ಸಮಾವೇಶ

ಮಸೂದೆಗೆ ಹಕ್ಕೊತ್ತಾಯ

ಜನರ ಆಗ್ರಹಕ್ಕೆ ಮಣಿದು ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣ ಕುರಿತು ಸುಗ್ರೀವಾಜ್ಞೆ ಹೊರಡಿಸಬೇಕು, ಇಲ್ಲವೇ ಮಸೂದೆ ರಚಿಸಬೇಕು. ಇದರ ಹೊರತಾಗಿ ಬೇರೆ ಮಾರ್ಗವಿಲ್ಲ ಎಂದು ನಾಗ್ಪುರದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಆರ್​ಎಸ್​ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ‘ನ್ಯಾಯದಾನ ವಿಳಂಬವಾದರೆ, ನ್ಯಾಯ ನಿರಾಕರಿಸಿದಂತೆ. ಸುಪ್ರೀಂಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದೆ. ಆದ್ಯತೆ ಸಿಗುತ್ತಿಲ್ಲ. ಸಮಾಜದ ಅಹವಾಲುಗಳನ್ನು ನ್ಯಾಯಾಲಯಗಳು ಕೇಳಿಸಿಕೊಳ್ಳಬೇಕಿದೆ. ಇದು ಸಾಧ್ಯವಾಗದ ಕಾರಣ ರಾಮಮಂದಿರ ನಿರ್ವಣದ ಕನಸು ದೂರವಾಗುತ್ತಿದೆ. ಹೀಗಾಗಿ ಜನಜಾಗೃತಿ ನಡೆಸುವ ಸಮಯ ಬಂದಿದೆ’ ಎಂದು ಭಾಗವತ್ ಹೇಳಿದರು.

ಅಯೋಧ್ಯೆಯ ವಿವಾದಿತ ಜಾಗದಲ್ಲಿ ಮಂದಿರವಿತ್ತು ಎನ್ನುವುದನ್ನು ಪುರಾತತ್ವ ಇಲಾಖೆ ಸಾಕ್ಷ್ಯ ಸಮೇತ ಹೇಳಿದೆ. ಕೋರ್ಟ್​ಗಳೂ ಇದನ್ನು ಒಪ್ಪಿಕೊಂಡಿವೆ. ಹೀಗಾಗಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ವಣಕ್ಕೆ ಯಾವುದೇ ಸಮಸ್ಯೆಯಿಲ್ಲ. ಬಾಬರ್​ನನ್ನು ವಿರೋಧಿಸಿದ ಮಾತ್ರಕ್ಕೆ ಮುಸ್ಲಿಂ ವಿರೋಧಿಗಳು ಎಂದಲ್ಲ. ಕೆಲವರು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

| ಮೋಹನ್ ಭಾಗವತ್, ಆರ್​ಎಸ್​ಎಸ್ ಮುಖ್ಯಸ್ಥ

ಕುಂಭಮೇಳ ವೇಳೆ ಮುಹೂರ್ತ ನಿಗದಿ:

ಮುಂದಿನ ವರ್ಷದ ಆರಂಭದಲ್ಲಿ ನಡೆಯುವ ಪ್ರಯಾಗ್​ರಾಜ್ ಕುಂಭಮೇಳದಲ್ಲಿ ರಾಮಮಂದಿರ ನಿರ್ವಣಕ್ಕೆ ಮುಹೂರ್ತ ನಿಗದಿಯಾಗುವ ಸಾಧ್ಯತೆ ಹೆಚ್ಚಿದೆ.

ಕುಂಭಮೇಳ ವೇಳೆ ಅಯೋಧ್ಯೆ ರಾಮಮಂದಿರ ನಿರ್ಮಾಣ ಕುರಿತು ಅಂತಿಮ ಘೋಷಣೆ ಹೊರಬೀಳಲಿದೆ ಎಂದು ಭಾನುವಾರದ ವಿರಾಟ್ ಧರ್ಮಸಭೆಯಲ್ಲಿ ನಿಮೋಹಿ ಅಖಾಡದ ರಾಮ್ೕ ದಾಸ್ ಸುಳಿವು ನೀಡಿದ್ದಾರೆ. ರಾಮಮಂದಿರ ನಿರ್ಮಾಣ ಯಾವಾಗ ನಡೆಯಲಿದೆ ಎನ್ನುವುದನ್ನು ಅಂದು ಘೋಷಿಸಲಾಗುವುದು. ಅಷ್ಟರೊಳಗೆ ಕೇಂದ್ರ ದಿಂದಲೂ ಸೂಕ್ತ ಕ್ರಮದ ನಿರೀಕ್ಷೆಯಿದೆ ಎಂದಿದ್ದಾರೆ.

ಇದಕ್ಕೆ ಪೂರಕವಾಗಿ ಪಂಚರಾಜ್ಯಗಳ ಚುನಾವಣೆ ನೀತಿ ಸಂಹಿತೆಯು ಡಿ.11ಕ್ಕೆ ಅಂತ್ಯವಾಗಲಿದೆ. ಇದಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರ ನಿರ್ಮಾಣ ಕುರಿತು ನಮ್ಮೊಂದಿಗೆ ರ್ಚಚಿಸಿ ಕ್ರಮಕ್ಕೆ ಮುಂದಾಗಲಿದ್ದಾರೆ ಎಂದು ರಾಮ್ೕ ದಾಸ್ ಹೇಳಿದ್ದಾರೆ.

‘ನ.23ರಂದು ಕೇಂದ್ರದ ಸಚಿವರೊಬ್ಬರಿಗೆ ನಾನು ಕರೆ ಮಾಡಿದ್ದೆ. ಅವರು ನೀಡಿರುವ ಮಾಹಿತಿ ಪ್ರಕಾರ ಡಿ.11ರ ನಂತರ ಖುದ್ದು ಪ್ರಧಾನಿಯೇ ನಮ್ಮೊಂದಿಗೆ ಮಂದಿರ ಕುರಿತು ಚರ್ಚೆ ನಡೆಸಲಿದ್ದಾರೆ. ಶೀಘ್ರವೇ ಸೂಕ್ತ ತೀರ್ಮಾನ ಹೊರಬೀಳಲಿದೆ. ಹೀಗಾಗಿ ಎಲ್ಲರೂ ಶಾಂತಚಿತ್ತರಾಗಿ ಕಾಯಬೇಕು’ ಎಂದು ಮನವಿ ಮಾಡಿದ್ದಾರೆ.

ayodhya,ram mandir,dharma sabha

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ