ನವದೆಹಲಿ: ದೇಶೀಯ ಪರಮಾಣುಚಾಲಿತ ಜಲಾಂತರ್ಗಾಮಿ ಐಎನ್ಎಸ್ ಅರಿಹಂತ್ ಮೊದಲ ಗಸ್ತು ಯಶಸ್ವಿಯಾಗಿ ಮುಗಿಸಿದ್ದು, ಐಎನ್ ಎಸ್ ಅರಿಹಂತ್ ಯಶಸ್ವಿ ಕಾರ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಐಎನ್ಎಸ್ ಅರಿಹಂತ್ ತನ್ನ ಕಾರ್ಯವನ್ನು ಪೂರ್ಣಗೊಳಿಸಿ ಬಂದ ಹಿನ್ನಲೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ನೌಕೆ ದೇಶದ ಆಸ್ತಿ.ಇದು ಭಾರತದ ಹೆಮ್ಮೆ, ಇದರ ಯಶಸ್ಸಿಗೆ ಕಾರಣರಾದವರಿಗೆಲ್ಲ ನನ್ನ ಅಭಿನಂದನೆಗಳು. ದೇಶದ ರಕ್ಷಣೆಯಲ್ಲಿ, ವಿರೋಧಿಗಳನ್ನ ನಾಶ ಮಾಡುವ ಶಕ್ತಿಶಾಲಿ ನೌಕೆ ಐಎನ್ಎಸ್ ಅರಿಹಂತ್ ಎಂದು ಹೇಳಿದ್ದಾರೆ.
ನಮ್ಮ ರಾಷ್ಟ್ರದ ರಕ್ಷಣೆ ಅಥವಾ ಭದ್ರತೆಯನ್ನ ಹೆಚ್ಚಿಸುವ ನಿಟ್ಟಿನಲ್ಲಿ ಐಎನ್ಎಸ್ ಅರಿಹಂತ್ ಮೊದಲ ಹೆಜ್ಜೆಯಾಗಿದೆ. ಅರಿಹಂತ್ ಗಸ್ತು ಪೂರ್ಣಗೊಳಿಸುವ ಮೂಲಕ ನಮ್ಮ ರಾಷ್ಟ್ರದ ವೈರಿಗಳಿಗೆ ಬಹಿರಂಗ ಸವಾಲು ಹಾಕಿದೆ ಎಂದು ಹೇಳಿದರು.
ಪರಮಾಣು ಬಾಂಬ್ ಹಾಕುವ ಬೆದರಿಕೆ ಹಾಕುವವರಿಗೆ ಅರಿಹಂತ್ ಸ್ಪಷ್ಟ ಉತ್ತರವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ಇನ್ನು ದೀಪಾವಳಿಗೂ ಮುನ್ನ ಈ ಸಾಧನೆ ಮಾಡಿದ ಭಾರತೀಯ ನೌಕಾಪಡೆಯನ್ನು ಧನ್ತೇರಾ ಸ್ಪೆಷಲ್ ಎಂದು ಬಣ್ಣಿಸಿದ್ದಾರೆ.
INS Arihant, successfully completes its first deterrence patrol,PM Modi