ಬೆಂಗಳೂರು:ಆ-೨೬: ಬೆಂಗಳೂರಿನ ಗಿರಿನಗರದ ವಿದ್ಯಾರ್ಥಿನಿ ಚಿನ್ಮಯಿ ಸಂಸ್ಕøತದಲ್ಲಿ ಕೇಳಿದ ಪ್ರಶ್ನೆಗೆ ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದಾರೆ.
ಪ್ರಧಾನಿ ಮೋದಿ ತಮ್ಮ ಮನ್ ಕಿ ಬಾತ್ ನಲ್ಲಿ ಸಂಸ್ಕೃತದ ಬಗ್ಗೆ ವಿಶೇಷವಾಗಿ ಉಲ್ಲೇಖ ಮಾಡಿ ಮಾತನಾಡಿದರು. ಬೆಂಗಳೂರಿನ ಗಿರಿನಗರದಲ್ಲಿರುವ ವಿಜಯ ಭಾರತಿ ಶಾಲೆಯಲ್ಲಿ ಓದುತ್ತಿರುವ ಚಿನ್ಮಯಿ ಎಂಬ ವಿದ್ಯಾರ್ಥಿನಿ ಸಂಸ್ಕೃತದಲ್ಲಿ ಪ್ರಶ್ನೆ ಮಾಡಿ ಗಮನ ಸೆಳೆದಿದ್ದಾಳೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಸಂಸ್ಕøತ ಸಪ್ತಾಹ ನಡೆಯುತ್ತಿರುವ ಈ ಸಂದರ್ಭದಲ್ಲಿ ನಾವು ರಕ್ಷಾಬಂಧನ, ಶ್ರಾವಣ ಪೂರ್ಣಿಮೆ ಜತೆಗೆ ಸಂಸ್ಕøತ ದಿನವನ್ನೂ ಹಬ್ಬದ ರೀತಿ ಆಚರಿಸೋಣ. ದೇಶದ ಪ್ರತಿಯೊಂದು ಭಾಷೆಗೂ ಮಹತ್ವವಿದೆ. ಅದರಲ್ಲೂ ಸಂಸ್ಕøತ ಸೇರಿ ಹಲವು ಭಾಷೆಗಳು ಜ್ಞಾನ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿವೆ ಎಂದು ಹೇಳಿದರು.
ಬಾಲಕಿ ಚಿನ್ಮಯಿ ಸಂಸ್ಕೃತ ಭಾರತೀಯ ಕಾರ್ಯಕರ್ತರಾದ ಲಕ್ಷ್ಮೀನಾರಾಯಣರ ಪುತ್ರಿ. ಈಗ 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳ ಮಾತೃ ಭಾಷೆ ಸಂಸ್ಕೃತ. ಕೇವಲ ಚಿನ್ಮಯಿ ಮಾತ್ರವಲ್ಲ, ಗಿರಿನಗರದಲ್ಲಿ ಇರುವ ಸಂಸ್ಕೃತ ಭಾರತೀಯ ಕಾರ್ಯಾಲಯ ಅಕ್ಷರಂ ನಲ್ಲಿ ಹತ್ತಕ್ಕೂ ಹೆಚ್ಚು ಮಕ್ಕಳು ಸಂಸ್ಕೃತದಲ್ಲಿ ಮಾತನಾಡುವಂತಹ, ಮಾತೃಭಾಷೆ ಹೊಂದಿರುವ ಮಕ್ಕಳು.
PM Modi, Man ki Baat,Bangalore,Chinmai