ಏಷ್ಯನ್ ಗೇಮ್ಸ್: ಭಾನುವಾರ ಭಾರತಕ್ಕೆ ಮೂರು ಬೆಳ್ಳಿ

ಜಕಾರ್ತ: ಏಷ್ಯನ್ ಗೇಮ್ಸ್ ಕ್ರೀಡಾಕೂಟದ 8ನೇ ದಿನ ಭಾನುವಾರ ಭಾರತ ಚಿನ್ನ ಗೆಲ್ಲದೇ ಇರಬಹುದು ಆದರೆ ಅಥ್ಲೀಟ್‍ಗಳಾದ ಹಿಮಾ ದಾಸ್, ದ್ಯೂತಿ ಚಾಂದ್ ಮತ್ತು ಮೊಹಮದ್ ದಾಸ್ ತಮ್ಮ ತಮ್ಮ ವಿಭಾಗಗಳಲ್ಲಿ ಬೆಳ್ಳಿ ಪದಕ ಗೆದ್ದು ಮಿಂಚಿದ್ರು. ಭಾರತ ಒಟ್ಟು 7 ಚಿನ್ನ, 10 ಬೆಳ್ಳಿ 19 ಕಂಚು ಪಡೆದು 9ನೇ ಸ್ಥಾನದಲ್ಲಿದೆ.
ಅಗ್ರ ಮಹಿಳಾ ಅಥ್ಲೀಟ್ ಒಡಿಶಾದ ದ್ಯುತಿ ಚಂದ್ ಮಹಿಳಾ ವಿಭಾಗದ 100 ಮೀ. ಓಟದ ಸ್ಪರ್ಧೆಯ ಫೈನಲ್‍ನಲ್ಲಿ 11.32 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಬೆಹ್ರೆನ್‍ನ ಒಡಿಒಂಗ್ ಎಡಿದಿಯಾಂಗ್ 11.30 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದುಕೊಂಡರು. ಇದರೊಂದಿಗೆ 1962ರಲ್ಲಿ ಸಿಯೊಲ್‍ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮಾಜಿ ಅಥ್ಲೀಟ್ ಪಿ.ಉಷಾ ಅವರ ದಾಖಲೆಯನ್ನ 32 ವರ್ಷಗಳ ನಂತರ ಸರಿಗಟ್ಟಿದ್ರು.
ಮೊಹ್ಮದ್ ಅನಸ್,ಹಿಮಾದಸ್‍ಗೆ ಬೆಳ್ಳಿ
ಪುರುಷರ ಮತ್ತು ಮಹಿಳೆಯರ 400 ಮೀಟರ್‍ನಲ್ಲಿ ಓಟದ ವಿಭಗದಲ್ಲಿ ಹಿಮಾ ದಾಸ್ ಮತ್ತು ಮೊಹ್ಮದ್ ಅನಾಸ್ ಎರಡನೇ ಸ್ಥಾನ ಪಡೆದರು.
ಹಿಮಾದಾಸ್ 50.79 ಸೆಕೆಂಡುಗಳಲ್ಲಿ ಗುರಿಮುಟ್ಟಿ ಬೆಳ್ಳಿ ಪದಕ ಪಡೆಯುವ ಜೊತೆಗೆ ರಾಷ್ಟ್ರೀಯ ದಾಖಲೆಯನ್ನ ಬರೆದರು. ಮೊಹ್ಮದ್ ಅನಾಸ್ 45.69 ಸೆಕೆಂಡುಗಳಲ್ಲಿ ಗುರಿಮುಟ್ಟಿದ್ದರೆ.
ಪುರುಷರ 10 ಸಾವಿರ ಮೀ. ರೇಸ್‍ನಲ್ಲಿ ತಮಿಳುನಾಡಿನ ಅಥ್ಲೀಟ್ ಜಿ.ಲಕ್ಷ್ಮಣನ್ 29:44.91 ಸೆಕೆಂಡುಗಳಲ್ಲಿ ಗುರಿಮುಟ್ಟಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ