ಕೊಹ್ಲಿಗೆ ಹೆದರಿ ರಾತ್ರಿಯೆಲ್ಲಾ ನಿದ್ದೆ ಮಾಡದೆ ಕಂಗಾಲಾಗಿದ್ದ ಇಂಗ್ಲೆಂಡ್ ಕ್ರಿಕೆಟಿಗರು!

ನವದೆಹಲಿ: ತಮ್ಮ ಅದ್ಭುತ ಬ್ಯಾಟಿಂಗ್ ನಿಂದ ವಿರಾಟ್ ಕೊಹ್ಲಿ ಇಂಗ್ಲೆಂಡ್ ಕ್ರಿಕೆಟಿಗರ ನಿದ್ದೆ ಕೆಡಿಸಿದಂತೂ ನಿಜ.
ಹೌದು, ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಉಭಯ ತಂಡಗಳಿಗೂ ಗೆಲುವು ಅಗತ್ಯವಾಗಿತ್ತು. ಇನ್ನು 1000ದ ಟೆಸ್ಟ್ ಪಂದ್ಯವನ್ನು ಗೆಲ್ಲುವ ತವಕದಲ್ಲಿ ಇಂಗ್ಲೆಂಡ್ ತಂಡವಿತ್ತು. ಇನ್ನು ಇಂಗ್ಲೆಂಡ್ ವಿರುದ್ಧ ಪಂದ್ಯ ಗೆದ್ದು ಭಾರತದ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿತ್ತು. ಆದರೆ ಟೀಂ ಇಂಡಿಯಾ ಕೇವಲ 31 ರನ್ ಗಳಿಗೆ ಪಂದ್ಯವನ್ನು ಸೋಲಬೇಕಾಯಿತು.
ಮುರಳಿ ವಿಜಯ್, ಶಿಖರ್ ಧವನ್, ಕೆಎಲ್ ರಾಹುಲ್, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್ ಸೇರಿದಂತೆ ಸ್ಟಾರ್ ಬ್ಯಾಟ್ಸ್ ಮನ್ ಗಳ ಕಳಪೆ ಪ್ರದರ್ಶನದ ನಡುವೆ ವಿರಾಟ್ ಕೊಹ್ಲಿ ಏಕಾಂಗಿಯಾಗಿ ಗೆಲುವಿಗಾಗಿ ಶ್ರಮಿಸಿದ್ದರು. ಆದರೆ ಕೊಹ್ಲಿಗೆ ಯಾವೊಬ್ಬ ಬ್ಯಾಟ್ಸ್ ಮನ್ ಕೂಡ ಕೈ ಜೋಡಿಸಿರಲಿಲ್ಲ. 194 ರನ್ ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಗೆ ಇಂಗ್ಲೆಂಡ್ ವೇಗಿಗಳು ಪೆವಿಲಿಯನ್ ಹಾದಿ ತೋರಿಸಿದರು. ಆದರೆ ವಿರಾಟ್ ಕೊಹ್ಲಿ ವಿಕೆಟ್ ಪಡೆಯುವುದು ಮಾತ್ರ ಕಷ್ಟಕರವಾಗಿತ್ತು.
ಕೊಹ್ಲಿ ವಿಕೆಟ್ ಪಡೆಯದೆ ಇದ್ದರೆ ನಾವು ಪಂದ್ಯವನ್ನು ಕೈಚೆಲ್ಲಬೇಕು ಎಂದು ಅರಿತ ಇಂಗ್ಲೆಂಡ್ ಕ್ರಿಕೆಟಿಗರು ರಾತ್ರಿಯೆಲ್ಲಾ ಕುಳಿತು ದೊಡ್ಡ ರಣತಂತ್ರವನ್ನೇ ಹಣೆದಿದ್ದರು. ಅದರಂತೆ ಸ್ಟೋಕ್ಸ್ ಗೆ ಬೌಲಿಂಗ್ ಮಾಡಲು ಬಿಟ್ಟು ಕೊಹ್ಲಿ ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ.
ನಾವೆಲ್ಲ ರಾತ್ರಿಯೆಲ್ಲಾ ವಿರಾಟ್ ಕೊಹ್ಲಿ ವಿಕೆಟ್ ಹೇಗೆ ತೆಗೆಯಬೇಕು ಎಂದು ಆಲೋಚನೆ ಮಾಡಿದ್ದೇವು. ಅಲ್ಲದೆ ಆ ದಿನ ರಾತ್ರಿ ನಾವೆಲ್ಲಾ ನಿದ್ದೆ ಮಾಡದೆ ಕಂಗಾಲಾಗಿದ್ದೇವು ಎಂದು ಸ್ವತಃ ಇಂಗ್ಲೆಂಡ್ ತಂಡ ವೇಗಿ ಜೇಮ್ಸ್ ಆ್ಯಂಡ್ರೂಸನ್ ಹೇಳಿಕೊಂಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ