ರಾಹುಲ್ ದ್ರಾವಿಡ್ ದಾಖಲೆ ಅಳಿಸಿ ಹಾಕಿದ ವಿರಾಟ್ ಕೊಹ್ಲಿ

ಮೆಲ್ಬೋರ್ನ್ : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಶತಕ ಬಾರಿಸದೇ ಇರಬಹುದು ಆದರೆ ಹೊಸ ದಾಖಲೆಯೊಂದನ್ನ ಬರೆದಿದ್ದಾರೆ. ಮೆಲ್ಬೋರ್ನ್ ಅಂಗಳದಲ್ಲಿ ನಡೆದ ಎರಡನೇ ದಿನದಾಟದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ವರ್ಷದ ರನ್ ಗಳಿಕೆಯಲ್ಲಿ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನ ಅಳಿಸಿ ಹಾಕಿದ್ದಾರೆ.

82 ರನ್ಗಳಿಸಿದ್ದಾಗ ವಿರಾಟ್ ಕೊಹ್ಲಿ ರಾಹುಲ್ ದ್ರಾವಿಡ್ ಅವರ ದಾಖಲೆಯನ್ನ ಅಳಿಸಿ ಹಾಕಿದ್ರು. ವಿರಾಟ್ ಕೊಹ್ಲಿ ಈ ವರ್ಷ 11 ಪಂದ್ಯಗಳನ್ನಾಡಿದ್ದು 21 ಇನ್ನಿಂಗ್ಸ್ಗಳಿಂದ 1,138 ರನ್ ಗಳಿಸಿದ್ದಾರೆ. ಇನ್ನು ರಾಹುಲ್ ದ್ರಾವಿಡ್ 2002ರಲ್ಲಿ 11 ಪಂದ್ಯ, 18 ಇನ್ನಿಂಗ್ಸ್ಗಳಿಂದ ನಾಲ್ಕು ಶತಕ ನಾಲ್ಕು ಅರ್ಧ ಶತಕದ ನೆರವಿನಿಂದ 1137 ರನ್ ಕಲೆ ಹಾಕಿದ್ದರು. ಕೊಹ್ಲಿ ಹನ್ನೊಂದನೇ ಪಂದ್ಯದ ಇನ್ನು ಒಂದು ಇನ್ನಿಂಗ್ಸ್ ಗಿಂತ ಮುಂಚಿತವಾಗಿ ದ್ರಾವಿಡ್ ಅವರ ದಾಖಲೆಯನ್ನ ಅಳಿಸಿ ಹಾಕಿದ್ದಾರೆ.

ಈಗ ನಡೆಯುತ್ತಿರುವ ಆಸಿಸ್ ವಿರುದಧ ಸರಣಿಯಲ್ಲಿ ಕೊಹ್ಲಿ ಐದು ಇನ್ನಿಂಗ್ಸ್ಗಳಿಂದ ಒಟ್ಟು 259 ರನ್ ಗಳಿಸಿದ್ದಾರೆ. ಇದಕ್ಕೂ ಮುನ್ನ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಆರು ಇನ್ನಿಂಗ್ಸ್ ಗಳಿಂದ 286 ರನ್ ಬಾರಿಸಿ 47.66 ಸರಾಸರಿ ಹೊಂದಿದ್ದರು. ಇನ್ನು ಆಂಗ್ಲರ ವಿರುದ್ಧದ ಸರಣಿಯಲ್ಲಿ 10 ಇನ್ನಿಂಗ್ಸ್ಗಳಿಂದ 593 ರನ್ ಕಲೆ ಹಾಕಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ