ಕೊಹ್ಲಿ ಆಟಕ್ಕೆ ಮನಸೋತು ವಿಶೇಷ ಉಡುಗೊರೆ ಕೊಟ್ಟ ಇಂಗ್ಲೆಂಡ್‌ನ ಸೌತಾಂಪ್ಟನ್ ಫುಟ್ಬಾಲ್ ಕ್ಲಬ್!

ಸಾಥಾಂಪ್ಟನ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು ಕೊಹ್ಲಿಯ ಆಟಕ್ಕೆ ಮನಸೋತಿರುವ ಸೌತಾಂಪ್ಟನ್ ಫುಟ್ಬಾಲ್ ಕ್ಲಬ್ ವಿಶೇಷ ಉಡುಗೊರೆಯನ್ನು ನೀಡಿದೆ.
ಇಂಗ್ಲೀಷ್ ಪ್ರಿಮಿಯರ್ ಲೀಗ್ ಕ್ಲಬ್ ಸೌತಾಂಪ್ಟನ್ ಫುಟ್ಬಾಲ್ ಕ್ಲಬ್ ವಿರಾಟ್ ಕೊಹ್ಲಿಯ ತಮ್ಮ ತಂಡದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿ ಗೌರವಿಸಿದೆ.
ಕೊಹ್ಲಿಗೆ ಜೆರ್ಸಿ ಉಡುಗೊರೆ ನೀಡಿರುವ ಕುರಿತಂತೆ ಸೌತಾಂಪ್ಟನ್ ತಮ್ಮ ಅಧಿಕೃತ ಟ್ವೀಟರ್ ನಲ್ಲಿ ಫೋಟೋವನ್ನು ಟ್ವೀಟ್ ಮಾಡಿದೆ. ಫೋಟೋದಲ್ಲಿ ಕ್ಲಬ್ ನ ಸ್ಟ್ರೈಕರ್ ಡ್ಯಾನಿ ಇಂಗ್ಸ್ ಜೆರ್ಸಿಯನ್ನು ಕೊಹ್ಲಿಗೆ ನೀಡಿ ಪೋಸ್ ನೀಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ನೂತನವಾಗಿ ಬಿಡುಗಡೆ ಮಾಡಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 937 ಅಂಕಗಳನ್ನು ಸಂಪಾದಿಸುವ ಮೂಲಕ ಮತ್ತೆ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಇನ್ನು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್ ನಲ್ಲಿ 46 ಮತ್ತು ಎರಡನೇ ಇನ್ನಿಂಗ್ಸ್ ನಲ್ಲಿ 58 ರನ್ ಬಾರಿಸಿದ್ದು, ಒಟ್ಟಾರೆ 8 ಇನ್ನಿಂಗ್ಸ್ ಗಳ ಪೈಕಿ 544 ರನ್ ಗಳನ್ನು ಪೇರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ