ವಿಂಡೀಸ್​ ವಿರುದ್ಧ ಅತಿ ಹೆಚ್ಚು ಸ್ಕೋರ್​… ಅಜರ್​ವುದ್ದೀನ್​ ದಾಖಲೆ ಮುರಿಯಲಿರುವ ಕೊಹ್ಲಿ

ಆಟಗಾರನಾಗಿ, ನಾಯಕನಾಗಿ ಪ್ರತಿಯೊಂದು ಪಂದ್ಯದಲ್ಲೂ ಯಾವುದಾದರೊಂದು ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಳ್ಳುವ ನಾಯಕ ಕೊಹ್ಲಿ ವಿಂಡೀಸ್​ ವಿರುದ್ಧ 39 ರನ್​ಗಳಿಸಿದರೆ ಮಾಜಿ ನಾಯಕ ಅಜರುದ್ಧೀನ್​ ದಾಖಲೆ ಮುರಿಯಲಿದ್ದಾರೆ.
ಅಜರ್​  ವಿಂಡೀಸ್​ ವಿರುದ್ಧ 539 ರನ್​ಗಳಿಸಿದ್ದಾರೆ. ಇದೀಗ ಮಾಜಿ ನಾಯಕ ಧೋನಿ(476) ದಾಖಲೆ ಮುರಿದಿರುವ ಕೊಹ್ಲಿ 502 ರನ್​ಗಳಿಸಿದ್ದಾರೆ. ಮೊದಲ ಟೆಸ್ಟ್​ನಲ್ಲಿ 39 ರನ್​ಗಳಿಸಿದರೆ ಅಜರ್​ ದಾಖಲೆ ಪುಡಿಗಟ್ಟಲಿದ್ದಾರೆ.
ಇನ್ನು ಸುನೀಲ್​ ಗವಾಸ್ಕರ್​ 2749,ದ್ರಾವಿಡ್​ 1978, ಲಕ್ಷ್ಮಣ್​ 1715, ಸಚಿನ್​ 1630 ಗಳಿಸಿದ್ದಾರೆ. ಕೊಹ್ಲಿ ವಿಂಡೀಸ್​ ವಿರುದ್ಧ ಕೇವಲ 10 ಪಂದ್ಯಗಳನ್ನಾಡಿದ್ದು,38.61 ಸರಾಸರಿಯಲ್ಲಿ 502 ರನ್​ಗಳಿಸಿದ್ದಾರೆ. 200 ವಯಕ್ತಿಕ ಸ್ಕೋರ್​ ಆಗಿದೆ.
ವಿಂಡೀಸ್​ ವಿರುದ್ದ ಈ ಟೂರ್ನಿಯಲ್ಲಿ ಕೊಹ್ಲಿಪಡೆ 5 ಏಕದಿನ, 2 ಟೆಸ್ಟ್​, ಮೂರು ಟಿ20 ಪಂದ್ಯವನ್ನಾಡಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ