ನವದೆಹಲಿ:ಆ-೩: ಜಿಎಸ್ಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಕುರಿತ ’ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಸಿನಿಮಾ ನಿರ್ದೇಶಕ ವಿಜಯ್ ರತ್ನಾಕರ್ ಗುತ್ತೆಯವರನ್ನು ಬಂಧಿಸಲಾಗಿದೆ.
ಮುಂಬೈನ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ನಿರ್ದೇಶನಾಲಯ ವಿಜಯ್ ಗುತ್ತೆಯನ್ನು ಬಂಧಿಸಿದ್ದು, ಕೋರ್ಟ್ ಗುತ್ತೆಗೆ ಆಗಸ್ಟ್ 14ರ ವರೆಗೆ ನ್ಯಾಯಾಂಗ ಬಂಧನ ನೀಡಿ ಆದೇಶಿಸಿದೆ.
ವಿಜಯ್ ಗುತ್ತೆಗೆ ಸೇರಿದ ವಿಆರ್ಜಿ ಡಿಜಿಟಲ್ ಕಾರ್ಪ್ ಪ್ರೈ. ಲಿ. ಕಂಪನಿ ನಕಲಿ ಇನ್ವಾಯ್ಸ್ಗಳ ಮೂಲಕ ಸುಮಾರು 34 ಕೋಟಿ ರೂ. ಜಿಎಸ್ಟಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಿಜಯ್ ಗುತ್ತೆ ವಿರುದ್ಧ ಸಿಜಿಎಸ್ಟಿ ಕಾಯ್ದೆ (CGST Act) ಸೆಕ್ಷನ್ 132(1)(ಸಿ) ಅನ್ವಯ ಪ್ರಕರಣ ದಾಖಲಿಸಲಾಗಿದೆ.
ವಿಜಯ್ ಗುತ್ತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕುರಿತು ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಮೊದಲು ವಿಜಯ್ ಗುತ್ತೆ ಎಮೋಷನಲ್ ಅತ್ಯಾಚಾರ್, ಟೈಂ ಬಾರಾ ವೈತ್ ಮತ್ತು ಬದ್ಮಾಶಿಯಾನ್ ಎಂಬ ಚಿತ್ರಗಳನ್ನು ನಿರ್ಮಿಸಿದ್ದರು.
Vijay Ratnakar Gutte,Director,’The Accidental Prime Minister’,Arrested