ರಾಷ್ಟ್ರಪತಿ ಕೋವಿಂದ್ ಹತ್ಯೆ ಬೆದರಿಕೆ: ಅರ್ಚಕ ಅರೆಸ್ಟ್

ತ್ರಿಸೂರು:ಆ-೬: ರಾಷ್ಟ್ರಪತಿ ರಾಮನಾಥ್ ಕೋವಿಂದ್ವರನ್ನು ಹತ್ಯೆಮಾಡುವುದಾಗಿ ಬೆದರಿಕೆಯೊಡ್ಡಿದ್ದ ಕೇರಳದ ತ್ರಿಸೂರ್ ನಲ್ಲಿನ ದೇವಾಲಯದ ಅರ್ಚಕರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ತ್ರಿಸೂರಿನ ಚಿರಕ್ಕಲ್ ಭಗವತಿ ದೇಗುಲದ ಅರ್ಚಕ ಜಯರಾಮನ್ ಬಂಧಿತ ಆರೋಪಿ. ತಡ ರಾತ್ರಿ ಒಂದು ಗಂಟೆಗೆ ಜಯರಾಮನ್ ಪೊಲೀಸ್ ಠಾಣೆಗೆ ಕರೆ ಮಾಡಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ರನ್ನು ಕೊಲ್ಲುವುದಾಗಿ ಹೇಳಿದ್ದಾನೆ. ಅಲ್ಲದೇ ಸೇಂಟ್ ಥಾಮಸ್ ಕಾಲೇಜಿಗೆ ಬಾಂಬ್ ಇಡುವುದಾಗಿ ಬೆದರಿಕೆಯೊಡ್ಡಿದ್ದ.

ದೂರವಾಣಿ ಕರೆಯ ಜಾದು ಹಿಡಿದ ಪೊಲೀಸರು ಇಂದು ಅರ್ಚಕ ಜಯರಾಮನ್ ರನ್ನ ಬಂಧಿಸಿದ್ದಾರೆ. ಪಾನಮತ್ತನಾಗಿದ್ದ ಅರ್ಚಕ ಅದೇ ಗುಂಗಿನಲ್ಲಿ ಕರೆ ಮಾಡಿದ್ದು, ಈಗ ತನಗೇನು ತಿಳಿದಿರಲಿಲ್ಲ ಎಂಬಂತೆ ನಡೆದುಕೊಂಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.

ಕೇರಳ ರಾಜ್ಯ ಪ್ರವಾಸದಲ್ಲಿರುವ ರಾಷ್ತ್ರಪತಿ ಕೋವಿಂದ್,ಅಲ್ಲಿನ ವಿಧಾನಸಭೆ ವಜ್ರಮಹೋತ್ಸವ ಹಿನ್ನಲೆಯಲ್ಲಿ ಹಿನ್ನಲೆಯಲ್ಲಿ ‘ಫೆಸ್ಟಿವಲ್ ಆಫ್ ಡೆಮಾಕ್ರಸಿ’ ಕಾರ್ಯಕ್ರಮವನ್ನು ಉದ್ಘಾಟಿಸುವ ಸಲುವಾಗಿ ತ್ರಿವೆಂಡ್ರಮ್’ಗೆ ಭೇಟಿ ನೀಡಿದ್ದಾರೆ.

ಅಲ್ಲದೆ ಮಂಗಳವಾರ ಸೈಂಟ್‌ ಥಾಮಸ್‌ ಕಾಲೇಜಿನ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಅರ್ಚಕನನ್ನು ಬಂಧಿಸಿದ್ದಾರೆ.

President Ramanath Kovind,Death threat, Priest, Arrested,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ