13 ವರ್ಷದ ಬಾಲಕಿ ಮೇಲೆ 76 ವರ್ಷದ ವೃದ್ಧನಿಂದ ನಿರಂತರ ಅತ್ಯಾಚಾರ: ಆರೋಪಿ ಬಂಧನ

ಹೈದರಾಬಾದ್‌:ಮಾ-3: 76 ವರ್ಷದ ವೃದ್ಧನೊಬ್ಬ 13 ವರ್ಷದ ಬಾಲಕಿಗೆ ಚಾಕಲೇಟ್‌, ತಿಂಡಿಯ ಆಸೆ ತೋರಿಸಿ ನಿರಂತರವಾಗಿ ಅತ್ಯಾಚಾರ ಎಸಗಿರುವ ಹೇಯ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಆರೋಪಿ ವೃದ್ಧ ಹಬೀಬ್‌ ನಗರದ ಅಘಾಪುರದ ಅಬ್ದುಲ್‌ ವಹಾಬ್‌ ಎಂದು ತಿಳಿದುಬಂದಿದ್ದು, ವೃದ್ಧನನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಕಾಮುಕ 2017 ರ ಜೂನ್‌ ತಿಂಗಳಿನಿಂದ ಬಾಲಕಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ತಿಳಿದು ಬಂದಿದೆ.

ಬಾಲಕಿಯ ದೇಹದಲ್ಲಿನ ಬದಲಾವಣೆ ಮತ್ತು ಹೊಟ್ಟೆ ನೋವಿನ ಕುರಿತಾಗಿ ವೈದ್ಯರ ಬಳಿ ಪರೀಕ್ಷಿಸಿದಾಗ ಬಾಲಕಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದ್ದು ಪೋಷಕರು ಕಂಗಾಲಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಪುಟ್ಟ ಬಾಲಕಿ ಇದೀಗ 7 ತಿಂಗಳ ಗರ್ಭಿಣಿ. ಹಬೀಬ್‌ನಗರ ಠಾಣೆಯ ಪೊಲೀಸರು ಸೆಕ್ಷನ್‌ 376 ಮತ್ತು ಪೋಕ್ಸೋ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Hyderabad,76-year-old man,arrested,raping minor girl

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ