ಬೆಂಗಳೂರು,ಜು.24- ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಹಂಗಾಮಿ ಸಭಾಪತಿಯನ್ನು ಮುಂದುವರೆಸಿರುವುದರ ವಿರುದ್ಧ ಬಿಜೆಪಿ ರಾಜಭವನದ ಕದ ತಟ್ಟಲು ನಿರ್ಧರಿಸಿದೆ.
ಹಂಗಾಮಿ ಸಭಾಪತಿಯಾಗಿ ಬಸವರಾಜ್ ಹೊರಟ್ಟಿ ಅವರೇ ಮುಂದುವರೆದಿರುವುದರಿಂದ ಸದ್ಯದಲ್ಲೇ ಬಿಜೆಪಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಲಿದೆ.
ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಕೂಡಲೇ ಮಧ್ಯಪ್ರವೇಶಿಸಿ ಖಾಯಂ ಸಭಾಪತಿ ನೇಮಕಕ್ಕೆ ಚುನಾವಣೆ ನಡೆಸಲು ಸರ್ಕಾರಕ್ಕೆ ಮಾರ್ಗದರ್ಶನ ಮಾಡುವಂತೆ ಕೋರಲಿದೆ.
ಇತಿಹಾಸದಲ್ಲಿ ಮೈತ್ರಿ ಸರ್ಕಾರ ಹೊಸ ಪದ್ಧತಿಗೆ ಮುಂದಾಗಿದೆ. ಮೈತ್ರಿ ಪಕ್ಷದಲ್ಲಿರುವ ಆಂತರಿಕ ಗಲಾಟೆ ಹಾಗೂ ಹುಳುಕನ್ನು ಮುಚ್ಚಿಕೊಳ್ಳಲು ಯತ್ನಿಸಲಾಗುತ್ತಿದೆ. ರಾಜ್ಯಪಾಲರ ಆದೇಶವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಂವಿಧಾನದ ಪರಮೋಚ್ಚ ಹುದ್ದೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಗೌರವ ತೋರುತ್ತಿದೆ ಎಂಬೆಲ್ಲ ಅಂಶಗಳನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲು ಬಿಜೆಪಿ ಮುಂದಾಗಿದೆ .
Congress-JDS Alliance Government,Provisional Speaker,Basavaraj horatti,BJP,Rajbhavan