
ದಾಂಡೇಲಿ: ಪ್ರತೀ ವರ್ಷದಂತೆ ಈವರ್ಷವೂ ಸಹ ನಗರದ ವೆಸ್ಟ್ಕೋಸ್ಟ್ ಪೇಪರ್ ಮಿಲ್ನವರು ಸ್ಥಳೀಯ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯತಿ ದರದಲ್ಲಿ ನೋಟಬುಕ್ ವಿತರಿಸಿದರು.
ಈ ಸಂದರ್ಬದಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ತಾಂತ್ರಿಕ ವಿಭಾಗದ ಅಧ್ಯಕ್ಷ ಬಿ.ಎಚ್. ರಾಟಿ, ಸಾರ್ವಜನಿಕ ಸಂಪರ್ಕಧಿಕಾರಿಗಳಾದ ಕೆ.ಜಿ. ಗಿರಿರಾಜ, ರಾಜೇಶ ತಿವಾರಿ, ಎಸ್.ಜಿ. ಜಾಲಿಹಾಳ, ಶೇಖರ ಬ್ಯಾಹೇತಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಚ್. ರಾಟಿಯವರು ವೆಸ್ಟ್ಕೋಸ್ಟ್ ಪೇಪರ್ ಮಿಲ್ ತನ್ನ ಉತ್ಪಾದನೆಯ ಜೊತೆಗೆ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯಡಿ ಹಲವು ಜನಸೇವಾ ಕಾರ್ಯಗಳನ್ನು ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉತ್ತೇಜನ ನೀಡುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ನಗರದ ಶಾಪಿಂಗ್ ಸೆಂಟರ್ನ ಮಳಿಗೆಗಳಲ್ಲಿ ನೋಟಬುಕ್ ವಿತರಿಸಲಾಗುತ್ತಿದ್ದ ನಿತ್ಯ ವಿದ್ಯಾರ್ಥಿಗಳು, ಪಾಲಕರು ಸಾಲು ನಿಂತಿರುವ ದೃಷ್ಯ ಸಾಮಾನ್ಯವಾಗಿ ಕಂಡುಬರುತ್ತಿತ್ತು.