ಸಾವಿಗೀಡಾದ ಸಾವಕ್ಕಳ ತಾಯಿಯ ಕಣ್ಣೀರೊರೆಸಿದ ಯುವಕ ಮಂಡಳ

ದಾಂಡೇಲಿ : ಬಿಕ್ಷುಕಿ ಸಾವಕ್ಕ ತಳವಾರಳ ಅಂತ್ಯಸಂಸ್ಕಾರವನ್ನು ದಾನಿಗಳ ನೆರವಿನಿಂದ ಮಾಡಿದ ಸ್ಥಳೀಯ ಗಾಂಧಿನಗರದ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ದಾನಿಗಳು ಕೊಟ್ಟ ಉಳಿದ ಹಣದಲ್ಲಿ ಆಕೆಯ ವೃದ್ದೆ ತಾಯಿ ಬಿಕ್ಷುಕಿಗೂ ಗುರುವಾರ ನಗರದ ಬಸ್ ನಿಲ್ದಾಣದಲ್ಲಿ ಮೂರು ಸೀರೆ, ಚಾದರ, ಇನ್ನಿತರ ಪರಿಕರಗಳ ಜೊತೆಗೆ ರೂ:1000/- ನಗದು ಹಣವನ್ನು ನೀಡಿ, ಆಕೆಯ ನಿರ್ಗತಿಕ ಮಗನೊಂದಿಗೆ ಆಕೆಯ ಹುಟ್ಟೂರು ಬೆಳಗಾವಿಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭದಲ್ಲಿ ನಗರದ ಹಿರಿಯ ಪತ್ರಕರ್ತ ಬಿ.ಎನ್.ವಾಸರೆ, ಯುವ ಸಮಾಜ ಸೇವಕ ಬಾಲಕೃಷ್ಣ ಗೌಡ, ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಅಧ್ಯಕ್ಷ ಸಂದೇಶ್.ಎಸ್.ಜೈನ್, ಪದಾಧಿಕಾರಿಗಳಾದ ಪ್ರಶಾಂತ ಶಿಳ್ಳಿನ, ಚಂದ್ರು ಆರ್ಯ, ಆನಂದ ಎಲ್ಲೂರಿ, ಪ್ರಕಾಶ ಡಿ.ಜೆ, ಅಬ್ಬಾಸಲಿ ಶಬ್ಬೀರ ಅಳ್ನಾವರ, ಪ್ರಮೋದ ನಾಣಿಯಪ್ಪ ಮೊದಲಾದವರು ಉಪಸ್ಥಿತರಿದ್ದರು.

ಅಲ್ಲಿ ಇಲ್ಲಿ ಅವರಿವರ ಬಳಿ ಬಿಕ್ಷೆ ಬೇಡಿ ಬದುಕುತ್ತಿದ್ದ ಜೀವವನ್ನು ಮರಳಿ ಸೂರು ಸೇರಿಸಿದ ಶ್ರೀ.ಗಣೇಶ ಹಿಂದು-ಮುಸ್ಲಿಂ-ಕ್ರೈಸ್ತ ಯುವಕ ಮಂಡಳದ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಶ್ಲಾಘನೆ ವ್ಯಕ್ತವಾಗಿದೆ.

500 Internal Server Error

Internal Server Error

The server encountered an internal error or misconfiguration and was unable to complete your request.

Please contact the server administrator, webmaster@push.vartamitra.com and inform them of the time the error occurred, and anything you might have done that may have caused the error.

More information about this error may be available in the server error log.

Additionally, a 500 Internal Server Error error was encountered while trying to use an ErrorDocument to handle the request.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ