ಅಂತರಾಷ್ಟ್ರೀಯ ಲಯನ್ಸ್ ನ ಶತಮಾನೋತ್ಸವ ಗೊಲ್ಡನ್ ಪಿನ್ ಪ್ರಶಸ್ತಿ ಪಡೆದ ಯು.ಎಸ್. ಪಾಟೀಲ

ದಾಂಡೇಲಿ : ಲಯನ್ಸ್ ಅಂತರಾಷ್ಟ್ರೀಯ ಅಮೇರಿಕಾದ ಓಕ್ ಬ್ರುಕ್ ನ ಪ್ರಧಾನ ಕಚೇರಿಯಿಂದ 2017-18 ನೇ ಸಾಲಿನಲ್ಲಿ ನೂತನ ಸದಸ್ಯರ ಸೇರ್ಪಡೆ ಮಾಡಿದಕ್ಕಾಗಿ ಲಯನ್ಸ್ನ ಕ್ಯಾಬಿನೆಟ್ ಸದಸ್ಯರಾದ ಯು.ಎಸ್. ಪಾಟೀಲ ಇವರಿಗೆ ಅಂತರಾಷ್ಟ್ರೀಯ ಲಯನ್ಸ್ನ ಶತಮಾನೋತ್ಸವದ ಗೊಲ್ಡನ್ ಪಿನ್ ಅವಾರ್ಡ ದೊರೆತಿದೆ.

ಲಯನ್ಸ್ನ ಡಿ.317ಬಿ ದ ಪ್ರಥಮ ಉಪ ಪ್ರಾಂತಪಾಲ ಎಂ.ಜೆ.ಎಫ್. ಲಯನ್ ಸಸೀಂದ್ರನ್ ನಾಯರ್ ದಾಂಡೇಲಿಯಲ್ಲಿ ಜರುಗಿದ ಲಯನ್ಸ್ ಕಾರ್ಯಕ್ರಮದಲ್ಲಿ ಈ ಗೊಲ್ಡನ್ ಪಿನ್ ಅವಾರ್ಡ ನೀಡಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಂಬಿಕಾನಗರ-ದಾಂಡೇಲಿ ಕ್ಲಬಗೆ ದೊರೆತ ಅಂತರಾಷ್ಟ್ರೀಯ ಶತಮಾನೋತ್ಸವ(2017-18)ರಲ್ಲಿ ಸದಸ್ಯರ ಸಂಖ್ಯೆ ಹೆಚ್ಚಳದ ಅಂತರಾಷ್ಟ್ರೀಯ ಬ್ಯಾನೆರ್ ಪ್ಯಾಚ್ನ್ನು ನಿಕಟಪೂರ್ವ ಅಧ್ಯಕ್ಷ ಅನಿಲ ದಂಡಗಲ್ ರವರಿಗೆ ಲಯನ್ ಸಸೀಂದ್ರನ್ ನಾಯರ್ ನೀಡಿ ಗೌರವಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ