ಆರೋಗ್ಯ ಜಾಗೃತಿಗೆ ಶಶಿಂದ್ರನ್ ನಾಯರ್ ಕರೆ

 

ದಾಂಡೇಲಿ : ಆರೋಗ್ಯವಂತ ಸಮಾಜ ನಿರ್ಮಾಣದ ಸಂಕಲ್ಪವನ್ನು ತೊಟ್ಟು ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಮಾನವ ಕಲ್ಯಾಣಕ್ಕಾಗಿ ತನ್ನ ಉಳಿದ ಹಳೆಯ ಸೇವಾ ಯೋಜನೆಗಳ ಜೊತೆ ಈ ಬಾರಿ ಮಧುಮೇಹ ತಪಾಸಣೆ ಹಾಗೂ ಚಿಕ್ಕ ಮಕ್ಕಳಲ್ಲಿ ಕ್ಯಾನ್ಸರ್ ರೋಗ ಗುರುತಿಸುವ ಬಗ್ಗೆ ಇಡಿ ವಿಶ್ವದಲ್ಲಿಯೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಲ್ಲಿ ಯೋಜನೆಗಳನ್ನು ಸಿದ್ಧಪಡಿಸಿದೆ ಎಂದು ಲಯನ್ಸ್ನ ಡಿ.317ಬಿ ನ ಪ್ರಥಮ ಉಪಪ್ರಾಂತಪಾಲ ಶಶಿಂದ್ರನ್ ನಾಯರ್ ನುಡಿದರು.

ಅವರು ಕಾಗದ ಕಾರ್ಖಾನೆಯ ಡಿಲಕ್ಸ್ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಅಂಬಿಕಾನಗರ-ದಾಂಡೇಲಿಯ 2018-19ರ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದಿಸಿ ಪದಗ್ರಹಣ ನೆರವೇರಿಸಿ ಮಾತನಾಡಿದರು.

ಇಂದು ಭಾರತದಲ್ಲಿಯೇ 120 ಮಿಲಿಯನ್ ಮಧುಮೇಹ ರೋಗವುಳ್ಳ ಜನರನ್ನು ಗುರುತಿಸಲಾಗಿದ್ದು ಈ ಕುರಿತು ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಆರೋಗ್ಯ ರಕ್ಷಣೆಗೆ ಜಾಗೃತಿ ಮೂಡಿಸಲು ಲಯನ್ಸ್ ಕ್ಲಬಿನ ಸದಸ್ಯರು ಮುಂದಾಗಬೇಕೆಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ವಿಧಾನ ಪರಿಷತ್ತಿನ ಸದಸ್ಯ ಲ: ಎಸ್.ಎಲ್. ಘೋಟ್ನೇಕರ್ ಮಾತನಾಡಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅಳ್ನಾವರ್-ಹಳಿಯಾಳ-ದಾಂಡೇಲಿಯಂತಹ ಗ್ರಾಮೀಣ ಭಾಗದ ಕ್ಲಬ್ಗಳಿಗೆ ಲಯನ್ಸ್ನ ಜಿಲ್ಲಾ ಹಾಗೂ ಅಂತರಾಷ್ಟ್ರೀಯ ಕೇಂದ್ರ ಕಚೇರಿಗಳಿಂದ ಹೆಚ್ಚಿನ ಅನುದಾನ ದೊರಕಿಸಿ ಕೊಡಬೇಕೆಂದು ಡಿಸ್ಟಿಕ್ನ ಲಯನ್ಸ್ ಪದಾಧಿಕಾರಿಗಳಲ್ಲಿ ವಿನಂತಿ ಮಾಡಿಕೊಂಡರು.

ಗೌರವ ಅತಿಥಿಗಳಾಗಿ ನಗರಸಭೆಯ ಅಧ್ಯಕ್ಷ ನಾಗೇಶ ಸಾಳುಂಕೆ ದಾಂಡೇಲಿಯ ಲಯನ್ಸ್ ಕ್ಲಬಿನ ಸೇವಾ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನೂತನ ಅಧ್ಯಕ್ಷರಾಗಿ ಅಧಿಕಾರಿ ಸ್ವೀಕರಿಸಿ ಮಾತನಾಡಿದ ವೈ.ಎನ್ ಮುನವಳ್ಳಿ ಬರುವ ವರ್ಷದಲ್ಲಿ ದಾಂಡೇಲಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರ ಅವಶ್ಯಕತೆ ಗಮನಿಸಿ ಕಾರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವದೆಂದರು.

ಪ್ರಸಾದ ವಿ. ಶಿರಹಟ್ಟಿ ಕಾರ್ಯದರ್ಶಿಯಾಗಿ, ಮಾರುತಿರಾವ್ ಮಾನೆ ಖಜಾಂಚಿಯಾಗಿ, ಎಂ.ಸಿ ಹೀರೆಮಠ, ಬಿ.ಎಸ್. ದೇಶಪಾಂಡೆ ಪ್ರಥಮ ಉಪಾಧ್ಯಕ್ಷರಾಗಿ ಮತ್ತು ಇತರ ನಿರ್ದೇಶಕರು ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು.

ನಿಕಟಪೂರ್ವ ಅಧ್ಯಕ್ಷ ಅನಿಲ ದಂಡಗಲ್ ಸ್ವಾಗತಿಸಿದರು. ಯು.ಎಸ್. ಪಾಟೀಲ ನಿರೂಪಿಸಿದರು. ಪ್ರಾಣೇಶ ಮುಗಳಿಹಾಳ ವಂದಿಸಿದರು. ರೋಟರಿ ಕ್ಲಬ ಅರಣ್ಯ ಇಲಾಖೆ ಲಯನ್ಸ್ ಕ್ಲಬ ಇತರ ಸಂಘದ ಪದಾಧಿಕಾರಿಗಳು ನೂತನ ಅಧ್ಯಕ್ಷ ವೈ.ಎನ್. ಮುನವಳ್ಳಿಯವರಿಗೆ ಸತ್ಕರಿಸಿ ಗೌರವಿಸಿದರು.

18ದಾಂಡೇಲಿ2 : ದಾಂಡೇಲಿಯಲ್ಲಿ ಲಯನ್ಸ್ ಕ್ಲಬಿನ 2018-19ರ ನೂತನ ಅಧ್ಯಕ್ಷರಾಗಿ ವೈ.ಎನ್. ಮುನವಳ್ಳಿ ಅಧಿಕಾರ ಸ್ವೀಕರಿಸಿದರು. ಪ್ರಥಮ ಉಪ ಪ್ರಾಂತಪಾಲ ಶಶಿಂದ್ರನ್ ನಾಯರ್ ಅಧಿಕಾರಿ ಹಸ್ತಾಂತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ