ನವದೆಹಲಿ:ಜೂ-೨೫: ಭಾರತ ಪ್ರವಾಸ ಕೈಗೊಂಡಿರುವ ಸೆಶೆಲ್ಸ್ನ ಪ್ರಧಾನಿ ಡ್ಯಾನಿ ಫೌರೆ ಅವರು ದೆಹಲಿಗೆ ಭೇಟಿ ನೀಡಿದ್ದು, ಈ ವೇಳೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಸ್ವಾಗತಿಸಿದರು.
ರಾಷ್ಟ್ರಪತಿ ಭನನಕ್ಕೆ ಬಂದ ಡ್ಯಾನಿ ಫೌರೆ ಅವರನ್ನು ರಾಷ್ಟ್ರಪತಿ ಹಾಗೂ ಪ್ರಧಾನಿ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಸೆಶೆಲ್ಸ್ನ ಪ್ರಧಾನಿ ಡ್ಯಾನಿ ಫೌರೆ ನಾನು ಶ್ರೇಷ್ಠ ರಾಷ್ಟ್ರದಲ್ಲಿದ್ದೇನೆ. ಭಾರತ ಮತ್ತು ಸೆಶೆಲ್ಸ್ ನಡುವಿನ ಸಂಬಂಧ ಉತ್ತಮಗೊಳ್ಳುತ್ತದೆ. ನನ್ನ ಈ ಭೇಟಿ ಉಭಯ ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ’ ಎಂದು ಹೇಳಿದ್ದಾರೆ.
ಬಳಿಕ, ಡ್ಯಾನಿ ಫೌರೆ ಅವರು ರಾಜ್ಘಾಟ್ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ಸೆಶೆಲ್ಸ್ ಪೂರ್ವ ಆಫ್ರಿಕಾದಿಂದ ಹಿಂದೂ ಮಹಾಸಾಗರದ 115 ದ್ವಿಪಗಳ ಸಮೂಹ. ಇಲ್ಲಿ ಹಲವು ಕಡಲ ತೀರಗಳು ಪ್ರವಾಸಿಗರ ನೆಚ್ಚಿನ ತಾಣಗಳು. ಹವಳ ಸೇರಿದಂತೆ ಪ್ರಾಕೃತಿಕ ನಿಕ್ಷೇಪಗಳಿವೆ. ಜತೆಗೆ ಅಲ್ಡೊಬಾರ್ ಎಂಬ ಅಪರೂಪದ ಆಮೆಯೂ ಇಲ್ಲಿನ ವಿಶೇಷ.
President of the Republic of Seychelles Danny Faure, PM Narendra Modi,Ram Nath Kovind