ನಮ್ಮದು ಅಂತ್ಯೋದಯ, ಅವರದ್ದು ವಂಶೋದಯ: ಕಾಂಗ್ರೆಸ್-ಜೆಡಿಎಸ್ ವಿರುದ್ಧ ಪ್ರಧಾನಿ ವಾಗ್ದಾಳಿ

ಮಂಗಳೂರು: ಕಾಂಗ್ರೆಸ್- ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರದ್ದು ವಂಶೋದಯ, ನಮ್ಮದು ಅಂತ್ಯೋದಯ, ನಮ್ಮ ಅಂತ್ಯೋದಯದಿಂದ ಪಾರದರ್ಶಕ ಆಡಳಿತ. ಅವರ ವಂಶೋದ್ಧಾರದಿಂದ ಕುಟುಂಬದವರಿಗೆ ಅಧಿಕಾರ ಎಂದು ಗುಡುಗಿದ್ದಾರೆ.

ಮಂಗಳೂರು ನಗರದಲ್ಲಿ ವಿಜಯ ಸಂಕಲ್ಪ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಲ್ಲಿ ಕೇಸರಿ ಸಮುದ್ರದ ಅಲೆ ಎದ್ದಿದೆ. ಆತ್ಮೀಯ ಮಂಗಳೂರು, ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ಬಾಂಧವರಿಗೆ ನನ್ನ ನಮಸ್ಕಾರಗಳು, ಈ ಬಾರಿ ಇಡೀ ಮೈದಾನವೇ ಕೇಸರಿ ಮಯವಾಗಿದೆ ಎಂದರು. ದೇಶ-ವಿದೇಶಗಳಲ್ಲಿ ಭಾರತದ ಕೀರ್ತಿ ಪ್ರಜ್ವಲಿಸುತ್ತಿದೆ. ಇದೆಲ್ಲವೂ ಮೋದಿಕಾರಣದಿಂದಾಗಿ ಅಲ್ಲ. ನಿಮ್ಮಿಂದಾ ಆಗಿದೆ. 2014ರಲ್ಲಿ ನೀವು ನೀಡಿದ ವೋಟ್ ನಿಂದ ಇದೆಲ್ಲವೂ ಸಾಧ್ಯವಾಗಿದೆ. ಈ ಬಾರಿ ಚುನಾವಣೆ ಕೇವಲ ಸರ್ಕಾರ ರಚನೆಗಾಗಿ ಅಲ್ಲ. ನವಭಾರತ ನಿರ್ಮಾಣಾದ ಸಾಕಾರಕ್ಕಾಗಿ ಚುನಾವಣೆ ಎಂದರು.

ಬಳಿಕ ಳಿಕ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೆಸ್-ಜೆಡಿಎಸ್ ಸೇರಿ ಎಲ್ಲರದ್ದೂ ಕುಟುಂಬವಾದ. ಅವರದ್ದು ವಂಶೋದ್ಧಾರ, ನಮ್ಮದು ಅಂತ್ಯೋದಯ. ನಮ್ಮ ಅಂತೋದಯದಿಂದ ಪಾರದರ್ಶಕ ಆಡಳಿತ. ಅವರ ವಂಶೋದ್ಧಾರದಿಂದ ಕುಟುಂಬದವರಿಗೆ ಅಧಿಕಾರ. ನಮ್ಮದು ರಾಷ್ಟ್ರಪ್ರೇಮ. ಅವರದ್ದು ಕುಟುಂಬ ಪ್ರೇಮ ಎಂದರು.

ವಂಶೋದಯ ಪಕ್ಷದ ವರಿಷ್ಠರನ್ನು ನೋಡುತ್ತೆ. ಅಂತ್ಯೋದಯ ಚಾಯ್ ವಾಲಾನನ್ನೂ ಪ್ರಧಾನಿಯನ್ನಾಗಿ ಮಾಡುತ್ತೆ. ನಮ್ಮ ಅಂತ್ಯೋದಯದಿಂದ ಚಾಯ್ ವಾಲಾ ಕುಡ ಪ್ರಧಾನಿ. ನಮ್ಮದು ರಾಷ್ಟ್ರೀಯ ಪ್ರೇರಣೆಯೊಂದಿಗೆ ಕೆಲಸಮಾಡುವುದು. ಅವರದ್ದು ಕುಟುಂಬದ ಪ್ರೇರಣೆಗಾಗಿ ಕೆಲಸ ಮಾಡುವುದಾಗಿದೆ. ಅವರ ದೃಷ್ಠಿ ವಂಶೋದಯ. ನಮ್ಮದೃಷ್ಠಿ ಅಂತ್ಯೋದಯ. ನಮ್ಮ ಅಂತ್ಯೋದಯದಿಂದ ಎಲ್ಲರಿಗೂ ಲಾಭವಾಗಲಿದೆ. ಬುಡಕಟ್ಟು ಸಮುದಾಯದವರಿಗೂ ಪದ್ಮಶ್ರೀ ಸಿಗುವಂತಾಗಿದೆ ಎಂದು ಪ್ರಧಾನಿ ಹೇಳಿದರು.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹಲವರು ಹುತಾತ್ಮರಾದರು. ಇಂತಹ ಹುತಾತ್ಮರನ್ನು ಸ್ಮರಿಸಿದರೆ ಕಾಂಗ್ರೆಸ್ ಗೆ ಆಗಲ್ಲ. ಸೇನೆಗೂ ಸಹ ಕಾಂಗ್ರೆಸ್ ಯಾವುದೇ ಗೌರವ ನೀಡಲ್ಲ. ಸೈನಿಕರನ್ನು ಗಲ್ಲಿಯ ಗೂಂಡಾ ಎಂದು ಕರಿತಾರೆ. ದೇಶದ ಪರಂಪರೆಯನ್ನು ಬಲಿಷ್ಠಗೊಳಿಸುವ ಬದಲು ಅದರಷ್ಟಕ್ಕೇ ಬಿಟ್ಟಿದ್ದಾರೆ.

ಶಬರಿಮಲೆ ಅಂದಕೂಡಲೇ ಜೈಲಿಗೆ ಹಾಕಲಾಗುತ್ತೆ. ಸೈರ್ಜಿಕಲ್ ಸ್ಟ್ರೈಕ್ ಮಾಡುವಾಗ ಇವರು ಸಾಕ್ಷಿ ಕೇಳ್ತಾರೆ. ನಮ್ಮ ಯೋಧರ ಸಾಮರ್ಥ್ಯದ ಬಗ್ಗೆ ಸಾಕ್ಷ್ಯ ಬೇಕೇ? ಉಗ್ರರ ಮನೆಗೇ ನುಗ್ಗಿ ಅವರನ್ನು ಹೊಡೆದು ಬಂದಿದ್ದಾರೆ. ಆದರೆ ಈ ಬಗ್ಗೆ ಮಹಾಘಟಬಂಧನ್ ಗೆ ವಿಶ್ವಾಸವಿಲ್ಲ. ದೇಶದ ಸೇನಾ ಮುಖ್ಯಸ್ಥರನ್ನೇ ಸುಳ್ಳುಗಾರ ಎಂದು ಕರೆಯುತ್ತಾರೆ ಎಂದು ಗುಡುಗಿದರು.

ನಮ್ಮ ಆರ್ಥಿಕ ವ್ಯವಸ್ಥೆ, ಬ್ಯಾಂಕಿಂಗ್ ವ್ಯವಸ್ಥೆಯನ್ನು ವೆಂಟಿಲೇಟರ್ ನಲ್ಲಿ ಇಟ್ಟಿದ್ದರು. ಸ್ವಾತಂತ್ರ್ಯದಿಂದ 2014ರವರೆಗೆ ಸುಮಾರು 60 ವರ್ಷಗಳ ಕಾಲ ಲೋನ್ ನೀಡಿದ್ದರು. ಕಮಿಷನ್ ಪಡೆದು ಅದೆಷ್ಟು ಸಾಲ ನೀಡಿದ್ದರೋ ಲೆಕ್ಕವಿಲ್ಲ. ಚೌಕಿದಾರ್ ಇಂತಹ ಆಟಕ್ಕೆ ಮಂಗಳ ಹಾಡಿದ್ದಾನೆ. ಈಗಾಗಲೇ ಮೂವರನ್ನು ಜೈಲಿಗೆ ಕಳುಹಿಸಿದ್ದೇವೆ. ಇನ್ನಷ್ಟು ಜನರೂ ಜೈಲು ಸೇರಲಿದ್ದಾರೆ.

ಕರ್ನಾಟಕದಲ್ಲಿ ಕುಇಸಾನ್ ಸಮ್ಮಾನ್ ಯೋಜನೆಗೆ ಅಡ್ಡಗಾಲು ಹಾಕಿದರು. ಇಲ್ಲಿನ ಸರ್ಕಾರ ಬಡವರ ಪಟ್ಟಿಕೊಡದೇ ವಿಳಂಬ ಮಾಡಿದೆ. ರಾಜ್ಯದಲ್ಲಿ ಸಾಲಮನ್ನಾ ಘೋಷಣೆ ಮಾಡಿದರು ಜಾರಿಗೆ ಬಂದಿಲ್ಲ. ಮೈತ್ರಿ ಸರ್ಕಾರಕ್ಕೆ ಅನಿವಾರ್ಯತೆ ಸರ್ಕಾರ ಬೇಕು. ಆದರೆ ಬಿಜೆಪಿಗೆ ಸಧೃಡತೆ ಸರ್ಕಾರ ಬೇಕು. ನಿಮ್ಮ ಸಹಕಾರದಿಂದ ಸದೃಢ ಸರ್ಕಾರ ರಚನೆಮಾಡಬಹುದು.

ಆಳ ಸಮುದ್ರ ಮೀನುಗಾರರಿಗೆ ಆರ್ಥಿಕ ನೆರವು ನೀಡುತ್ತಿದ್ದೇವೆ. ಮೀನುಗಾರಿಕೆಗಾಗಿಯೇ ಪ್ರತ್ಯೇಕ ಸಚಿವಾಲಯ ಮಾಡಲಿದ್ದೇವೆ. ಕಿಸಾನ್ ಕ್ರೆಡಿಟ್ಕಾರ್ಡ್ ಮೂಲಕ ಲಾಭಪಡೆಯಬಹುದು ಎಂದು ಹೇಳಿದರು.

lok sabha election,pm narendra modi,mangalore,vijaya sankalpa rally

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ