ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ಮಾಡುವೆ: ನಟ ಕಿಚ್ಚ ಸುದೀಪ್

ಬೆಂಗಳೂರು:ಮೇ-4: ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರ ನಡೆಸಲಿರುವ ನಟ ಕಿಚ್ಚಾ ಸುದೀಪ್, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ನಡೆಸುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸುದೀಪ್, ನಾನೊಬ್ಬ ಕಲಾವಿದನಾಗಿ ಯಾವ ಪಕ್ಷದ ಪರವಾಗಿ ನಿಲ್ಲುವುದಿಲ್ಲ. ಆದರೆ ಸಿಎಂ ಮೇಲಿನ ಅಭಿಮಾನದಿಂದ ಚಾಮುಂಡೇಶ್ವರಿಯಲ್ಲಿ ಮಾತ್ರವೇ ನಾನು ಸಿದ್ದರಾಮಯ್ಯ ಪರ ಪ್ರಚಾರ ನಡೆಸುತ್ತೇನೆ ಎಂದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೆ ಆತ್ಮೀಯರಿದ್ದಾರೆ. ಮುಖ್ಯಮಂತ್ರಿ ಆಗುವ ಮುಂಚಿನಿಂದಲೂ ಅವರು ನನಗೆ ಪರಿಚಯವಿತ್ತು. ಅಂದು ಹೇಗಿದ್ದರೋ ಇಂದೂ ಹಾಗೆಯೇ ಇದ್ದಾರೆ. ಅದೇ ರೀತಿಯಲ್ಲಿ ಬಾದಾಮಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ನಮ್ಮ ಸಮುದಾಯಕ್ಕೆ ಸೇರಿದವರು. ಅವರೂ ಸಹ ನನಗೆ ಬಹಳ ಬೇಕಾದವರಿದ್ದಾರೆ. ಈ ಕಾರಣದಿಂದ ನಾನು ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಪರ ಪ್ರಚಾರ ನಡೆಸಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ನನಗೆ ಸಾಕಷ್ಟು ಅವಕಾಶ ನಿಡಿದ್ದಾರೆ. ಹಾಗಾಗಿ ಅವರ ಮಾತಿಗೆ ಇಲ್ಲ ಅನ್ನೊಕಾಗಲ್ಲ. ನಾನು ಅವರ ಮೇಲಿನ ಅಭಿಮಾನದಿಂದ ಮಾತ್ರವೇ ಪ್ರಚಾರ ಮಾಡುತ್ತೇನೆ; ಪಕ್ಷದ ಕುರಿತಂತೆ ಅಲ್ಲ ಎಂದರು. ಇನ್ನು ಸುರಪುರದ ಬಿಜೆಪಿ ಶಾಸಕ ರಾಜು ಗೌಡ ಸಹ ನನ್ನ ಸ್ನೇಹಿತರು. ಅವರ ಪರ ಸಹ ನಾನು ಪ್ರಚಾರ ಕೈಗೊಳ್ಳಲಿದ್ದೇನೆ ಎಂದು ಸುದೀಪ್ ತಿಳಿಸಿದ್ದಾರೆ.

karnataka assembly election,CM Siddaraamaiah,kichcha sudeep

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ