ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರನ್ನು ಶ್ಲಾಘಿಸಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ

ಉಡುಪಿ:ಮೇ-1: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇವೇಗೌಡರು ದೇಶದ ಹಿರಿಯ ನಾಯಕರು. ಅವರನ್ನು ನಾನು ಗೌರವಿಸುತ್ತೇನೆ. ದೇವೇಗೌಡ ದೇಶ ಕಂಡ ಶ್ರೇಷ್ಠ ನಾಯಕ ಎಂದು ಹಾಡಿಹೊಗಳಿದ್ದಾರೆ.

ಎಂಜಿಎಂ ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್‌‌.ಡಿ ದೇವೇಗೌಡರು ದೆಹಲಿಗೆ ಬಂದಾಗಲೆಲ್ಲಾ ಬಾಗಿಲವರೆಗೂ ಬಂದು ಸ್ವಾಗತ ಕೋರುತೇನೆ, ಮತ್ತೆ ಹೋಗುವಾಗಲು ಕಾರಿನ ಬಳಿ ಹೋಗಿ ಬೀಳ್ಕೂಡುತ್ತೇನೆ ಎಂದರು. ಆದರೆ ಚುನಾವಣೆ ವೇಳೆ ಕಾಂಗ್ರೆಸ್‌‌ ಪಕ್ಷದವರು ದೇವೇಗೌಡರನ್ನ ವ್ಯಂಗ್ಯ ಮಾಡುವುದರ ಜತೆಗೆ ಅವಮಾನ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಜೀವನ ಈಗಷ್ಟೇ ಆರಂಭವಾಗಿದೆ. ಆದರೆ. ದೇವೇಗೌಡರು ಜೀವನವನ್ನು ಎಷ್ಟೊಂದು ಸವೆಸಿದ್ದಾರೆ. ಅವರಿಗೆ ಕಾಂಗ್ರೆಸ್ ಗೌರವಿಸುತ್ತಿಲ್ಲ ಎಂದು ವಗದಾಳಿ ನಡೆಸಿದರು.

ದಕ್ಷಿಣ ಕನ್ನಡ ಹಾಗೂ ಉಡುಪಿ ದೇವಭೂಮಿ ಅಂತಾ ಖ್ಯಾತಿಯಾಗಿದೆ. 40 ವರ್ಷಗಳಿಂದ ಈ ಜಿಲ್ಲೆ ಪಕ್ಷಕ್ಕೆ ಭಾರಿ ಕೊಡುಗೆ ನೀಡಿದೆ. ಜನಸಂಘಕ್ಕಾಗಿ ಉಡುಪಿಯ ಕೊಡುಗೆ ಅಪಾರವಾದುದು. ಜನಸಂಘಕ್ಕೆ ಇಲ್ಲಿಂದ ಪದಾಧಿಕಾರಿಗಳನ್ನು ಕಳುಹಿಸಿಕೊಡಲಾಗುತ್ತಿತ್ತು. ಟಿಎಂಎ ಪೈ, ಹಾಜಿ ಸಾಹೇಬ್, ಎಬಿ ಶೆಟ್ಟಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಆದರೆ ಅದೇ ಬಡವರನ್ನು ಬ್ಯಾಂಕ್ ನಿಂದ ದೂರ ಇಡಲಾಯಿತು. ಬಡವರ ಹೆಸರಲ್ಲಿ ಬ್ಯಾಂಕ್ ಗಳನ್ನು ರಾಷ್ಟ್ರೀಕರಣಗೊಳಿಸಲಾಯ್ತು.

ನಮ್ಮ ಸರ್ಕಾರ ಯುವ ಜನತೆಯ ಭವಿಷ್ಯ ರೂಪಿಸಲು ಪಣ ತೊಟ್ಟಿದೆ. ಮಠ ಮಂದಿರ, ಗುರುಗಳು ನಮಗೆ ಪ್ರೇರಣೆಯಾಗಿದ್ದಾರೆ ಎಂದರು. ಜನ್ ಧನ್ ಮೂಲಕ ಬಡವರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಕೈ ಜೋಡಿಸಲಾಗಿದೆ. ನಮ್ಮ ಸರ್ಕಾರ ಯುವ ಜನತೆಯ ಭವಿಷ್ಯ ರೂಪಿಸಲು ಪಣ ತೊಟ್ಟಿರುವುದಾಗಿ ಹೇಳಿದ ಮೋದಿ, ಕಾಂಗ್ರೆಸ್ ಬಡವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜಕೀಯ ಕಾರಣಕ್ಕಾಗಿ ಅಮಾಯಕರನ್ನು ಹತ್ಯೆ ಮಾಡಲಾಗಿದೆ ಎರಡು ಡಜನ್ ಗಳಿಗೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಜನರ ಹತ್ಯೆಯಾಗಿದೆ .ರಾಜಕೀಯ ಕಾರಣಕ್ಕಾಗಿ ಅಮಾಯಕರ ಹತ್ಯೆ ಮಾಡಲಾಗುತ್ತಿದೆ. ಎರಡು ಡಜನ್ ಗಿಂತಲೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ದುರಹಂಕಾರವನ್ನು ಖಂಡಿಸಿದರು. ಪ್ರತಿಬಾರಿ ಮಾಜಿ ಪ್ರಧಾನಿ ದೇವೇಗೌಡ ಅವರು ಭೇಟಿ ಮಾಡಿದಾಗಲೆಲ್ಲ ಮಾತನಾಡಿ ಕಳುಹಿಸಿದ್ದೇನೆ. ಹಿರಿಯ ನೇತಾರನಿಗೆ ಗೌರವ ನೀಡಿದ್ದೇನೆ. ಆದರೆ, ರಾಜ್ಯ ಕಾಂಗ್ರೆಸ್‌ ನಾಯಕರು ಹಾಗೂ ಸಿಎಂ ಜೆಡಿಎಸ್‌ ವರಿಷ್ಠ ನೇತಾರನನ್ನು ಅವಮಾನಿಸಿದ್ದಾರೆ. ಇದಕ್ಕೆ ರಾಜ್ಯದ ಜನ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಇನ್ನು ರಾಜ್ಯದಲ್ಲಿ ಮರಳು ಮಾಫಿಯಾ ಮಿತಿ ಮೀರುತ್ತಿದೆ. ಇದಕ್ಕೆ ಕಡಿವಾಣ ಹಾಕುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇಂತಹ ಸರ್ಕಾರ ನಿಮಗೆ ಬೇಕಾ..? ಇಂತಹ ಕೃತ್ಯಕ್ಕೆ ನಿಮ್ಮ ಬೆಂಬಲ ವಿದೆಯಾ..? ಎಂದು ನೆರದ ಜನರನ್ನು ಪ್ರಶ್ನೆ ಮಾಡಿದ ಪ್ರಧಾನಿ, ಸಾರ್ವಜನಿಕ ಬದುಕಿನಲ್ಲಿ ಮೌಲ್ಯಗಳು ಇರಬೇಕು. ಆ ಮೌಲ್ಯಗಳನ್ನು ಉಳಿಸಿಕೊಳ್ಳಲು ಸರ್ಕಾರ ಬದಲಾವಣೆ ಮಾಡುವುದು ಅಗತ್ಯವಾಗಿದೆ ಎಂದು ಕರೆ ನೀಡಿದರು.

karnataka assembly election,Udupi,PM narendra modi,H D Devgowda

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ