ಜೆಡಿಎಸ್ ಜೋರು…

ಚಿತ್ರದುರ್ಗ: ಜೆಡಿಎಸ್ ಗೆ ತೆಲಂಗಾಣದ ಟಿಆರ್ ಎಸ್ ಬೆಂಬಲ ಸೂಚಿಸಿದೆ ಎಂದು ಟಿಆರ್ ಎಸ್ ನ ವಿಧಾನಪರಿಷತ್ ಸದಸ್ಯ ಹನುಮಂತರಾವ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆಲಂಗಾಣದಲ್ಲಿ ಟಿಆರ್ ಎಸ್ 150ರಲ್ಲಿ 96ಕ್ಷೇತ್ರಗಳಲ್ಲಿ ಜಯಗಳಿಸಿದೆ, ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನ ಟಿಆರ್ ಎಸ್ ಬೆಂಬಲಿಸಿದ್ದಾರೆ,ಅದೇ ರೀತಿ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು,ಹೀಗಾಗಿ ನಾವು ಜೆಡಿಎಸ್ ಗೆ ಬೆಂಬಲ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ದೆಹಲಿ ನಿಯಂತ್ರಣದಲ್ಲಿರುವ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯದ ಅಭಿವೃದ್ಧಿ ಆಗುತ್ತಿಲ್ಲ,ಯಾವುದೇ ಅಭಿವೃದ್ಧಿ ಮಾಡಬೇಕಾದರೆ ದೆಹಲಿಯಿಂದ ನಿರ್ದೇಶನ ಪಡೆಯಬೇಕು,ಹೀಗಾಗಿ ಜೆಡಿಎಸ್ ಗೆ ನೀವು ಅವಕಾಶ ಕೊಟ್ಟರೇ ರಾಜ್ಯದಲ್ಲಿರುವ ನಾಯಕರೇ ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸುತ್ತಾರೆ, ಕುಮಾರಸ್ವಾಮಿ ಅವರು ಉತ್ತಮ ಆಡಳಿತ ನಡೆಸಿದ್ದರು,ದೇವೇಗೌಡರು ಪ್ರಧಾನಿಗಳಾಗಿದ್ದಾಗ ಅವರ ಕಾರ್ಯಗಳು ಇಂದಿಗೂ ಸ್ಮರಿಸುವಂತಿವೆ ಎಂದರು. ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯ ಇನ್ನಷ್ಟು ಅಭಿವೃದ್ಧಿ ಸಾಧ್ಯ,ಕುಮಾರಸ್ವಾಮಿ ಅವರ ಪ್ರಣಾಳಿಕೆಯಲ್ಲಿರುವ ಅಂಶಗಳು ಜನಪರವಾಗಿವೆ.ನೀರಾವರಿಗೆ ಹೆಚ್ಚಿನ ಆಧ್ಯತೆ ಸಿಗುತ್ತದೆ, ಮಹಿಳೆಯರು, ಮಕ್ಕಳು‌ ಮತ್ತು ರೈತರ ಬದುಕು ಹಸನಾಗುತ್ತದೆ. ಈ ಹಿಂದೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಅಧಿಕಾರ ಕೊಟ್ಟಿದ್ದೀರಿ,ರಾಷ್ಟ್ರೀಯ ಪಕ್ಷಗಳ ಬಗ್ಗೆ ಜನ ಬೇಸತ್ತಿದ್ದಾರೆ. ಹೀಗಾಗಿ ಒಂದು ಬಾರಿ ಜೆಡಿಎಸ್ ಗೆ ಅಧಿಕಾರ ಕೊಟ್ಟು ನೋಡಿ ಎಂದು ಮನವಿ ಮಾಡಿದರು.

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆಸಿ ವೀರೇಂದ್ರ ಯುವಕಾರಿದ್ದಾರೆ ಯುವ ಉತ್ಸಾಹಿಗೆ ಮತ ನೀಡುವ ಮೂಲಕ‌ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ,ರಾಜ್ಯದಾದ್ಯಂತ ಜೆಡಿಎಸ್ ದಿನೇ ದಿನೇ ಸಂಚಲನ ಸೃಷ್ಟಿಸುತ್ತಿದೆ,ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ,ಚುನಾವಣೆ ವೇಳೆಗೆ ಮತ್ತಷ್ಟು ಬೆಂಬಲ ದ್ವಿಗುಣಗೊಳ್ಳುತ್ತಿದೆ,ಜೆಡಿಎಸ್ ಅಧಿಕಾರಕ್ಕೆ ಬರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎಂದು ಹೇಳಿದರು.

ರಾಯಚೂರು: ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ಗಿಲ್ಲೆಸಗೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಕಾರ್ಯಕರ್ತರ ಸಭೆ
ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಭಾಗಿದರು. ಜಿಲ್ಲೆಯಲ್ಲಿಕುಡಿವ ನೀರಿನ ಸಮಸ್ಯೆ ಇದೆ.ನದಿ ಮೂಲದಿಂದ ಗ್ರಾಮಗಳಿಗೆ ನೀರು ನೀಡಿಲ್ಲ.ರಾಜ್ಯಕ್ಕೆ ಬೆಳಕು ನೀಡುವ ವಿದ್ಯುತ್ ಶಕ್ತಿ ನೀಡಿದ ಜಿಲ್ಲೆಯಲ್ಲಿಯೇ ವಿದ್ಯುತ್ ನೀಡುವಲ್ಲಿ ಅನ್ಯಾಯವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಮಾಡಿಕೊಂಡರೂ ರಾಷ್ಟ್ರೀಯ ಪಕ್ಷಗಳು ನೆರವಿಗೆ ಬರುತ್ತಿಲ್ಲ. ನರೇಂದ್ರ ಮೋದಿಯವರು ರೈತರ ಸಾಲಮನ್ನಾ ಮಾಡುವುದಿಲ್ಲ ಎಂದಿದ್ದಾರೆ. ರಾಜ್ಯ ಸರಕಾರ ಸಾಲಮನ್ನಾ ಘೋಷಣೆ ಮಾಡಿದೆ ಅದರೆ ರೈತರ ಸಾಲಮನ್ನಾ ಮಾಡಿಲ್ಲ.ಯಡಿಯೂರಪ್ಪ ಮೇ ೧೭ ಕ್ಕೆ ಮುಖ್ಯಮಂತ್ರಿ ಎಂದು ಸ್ವಯಂಘೋಷಣೆ ಮಾಡಿದ್ದಾರೆ.

ಸಿದ್ದರಾಮಯ್ಯ ಅವರಪ್ಪನಾಣೆ ಮುಖ್ಯಮಂತ್ರಿ ಯಾಗುವುದಿಲ್ಲ ಎಂದಿದ್ದಾರೆ. ನಾನು ನಿಮ್ಮ ಆಶೀರ್ವಾದದಿಂದ ಮುಖ್ಯಮಂತ್ರಿ ಯಾದರೆ ಸಾಲಮನ್ನಾ ಮಾಡುತ್ತೇನೆ. ಹೊಸ ಕೃಷಿ ನೀತಿ ಜಾರಿಗೊಳಿಸುತ್ತೇನೆ ಎಂದರು.

ಆರೋಗ್ಯ ಸರಿ ಆದರೆ ನನ್ನ ಆರೋಗ್ಯಕ್ಕಿಂತ ರೈತರ ಆತ್ಮಹತ್ಯೆ ನಿಲ್ಲಿಸುವ ಉದ್ದೇಶದಿಂದ ಏಕಾಂಗಿಯಾಗಿ ತಿರುಗುತ್ತಿದ್ದೇನೆ. ನೀವು ಉಳಿಯಬೇಕಾದರೆ ನನಗೆ ಬೆಂಬಲಿಸಿ. ಟಿಎಸ್ಆರ್ ಜಾರಿ ತಂದಿರುವ ಕುಡಿವ ನೀರು ನೀಡುತ್ತೇನೆ.ನಮ್ಮ ತಪ್ಪಿನಿಂದ ಗ್ರಾಮೀಣ ಕ್ಷೇತ್ರದಲ್ಲಿ ಕಳೆದ ಬಾರಿ ಸೋತಿದ್ದೇವೆ ಆದರೆ ಈ ಬಾರಿ ತಪ್ಪು ಮಾಡುವುದಿಲ್ಲ. ಮೇ ೬ ರಂದು ರಾಯಚೂರಿಗೆ ಮಾಯಾವತಿ ಪ್ರಚಾರ ಕಾರ್ಯಕ್ರಮ ಕ್ಕೆ ಬರುತ್ತಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ