ಬಹುಶ್ರುತ ವಿದ್ವಾಂಸ ಬನ್ನಂಜೆ ಇನ್ನಿಲ್ಲ

ಉಡುಪಿ: ಮಾಧ್ವ ಪರಂಪರೆಯ ಬಹುಶ್ರುತ ವಿದ್ವಾಂಸ, ನಾಡಿನ ಹಿರಿಯ ಪ್ರವಚನಕಾರ, ಬಹುಭಾಷಾ ಅನುವಾದಕ, ಸಾಹಿತ್ಯ ಸಂಶೋಧಕ, ಪತ್ರಕರ್ತ ಪದ್ಮಶ್ರೀ ಪುರಸ್ಕøತ ಡಾ. ಬನ್ನಂಜೆ ಗೋವಿಂದಾಚಾರ್ಯ (84) ಅವರು ಭಾನುವಾರ ಅಸ್ತಂಗತರಾದರು.
ಅಂಬಲಪಾಡಿಯ ತಮ್ಮ ಸ್ವಗೃಹ ಈಶಾವಾಸ್ಯಮ್‍ನಲ್ಲಿ ಕೊನೆಯುಸಿರೆಳೆದರು. ಆಚಾರ್ಯರು ಸಾಹಿತಿ ವೀಣಾ ಬನ್ನಂಜೆ ಸಹಿತ ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಆಚಾರ್ಯರ ಕಿರಿಯ ಮಗ ವಿಜಯಭೂಷಣ ಈಚೆಗೆ ಮೃತರಾಗಿದ್ದರು. ಭಾನುವಾರ 12ನೇ ದಿನದ ವಿ ಪೂರೈಸಿದ ಕುಟುಂಬಕ್ಕೆ ಇನ್ನೊಂದು ಆಘಾತ ನೀಡಿದೆ.
ಉಡುಪಿಯ ಅಂಬಲಪಾಡಿಯಲ್ಲಿ 1936ರಲ್ಲಿ ಜನಿಸಿದ ಗೋವಿಂದಾಚಾರ್ಯರು, ಹಲವು ತಿಂಗಳಿಂದ ವಯೋಸಹಜ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಆಚಾರ್ಯತ್ರಯರ ಭಾಷ್ಯವನ್ನು ಒಳಗೊಂಡ ಭಗವದ್ಗೀತೆಯ ರಚನಾ ಕಾರ್ಯದಲ್ಲಿ ಮಗ್ನರಾಗಿದ್ದರು. ಆದರೆ ಆ ಕಾರ್ಯ ಪೂರ್ಣಗೊಳ್ಳುವ ಮೊದಲೇ ಅವರು ಅಗಲಿದ್ದಾರೆ.
ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ :
ಭಾರತ ಸರಕಾರದ ಪದ್ಮಶ್ರೀ ಪುರಸ್ಕøತ ಡಾ. ಬನ್ನಂಜೆ ಗೋವಿಂದಾಚಾರ್ಯ ಅವರಿಗೆ ಸರಕಾರಿ ಗೌರವದೊಂದಿಗೆ ಅಂತಿಮ ವಿದಾಯ ನೀಡಲಾಯಿತು.
ಸಂಜೆ 5.50ಕ್ಕೆ ಬನ್ನಂಜೆಯಲ್ಲಿನ ಅವರ ಮನೆಯಲ್ಲಿ ಪಾರ್ಥಿವ ಶರೀರಕ್ಕೆ ಜಿಲ್ಲಾಕಾರಿ ರಾಷ್ಟ್ರಧ್ವಜವನ್ನು ಹೊದಿಸಿ, ಪುಷ್ಪ ಸಮರ್ಪಿಸಿದರು.
ನಂತರ ಜಿಲ್ಲಾ ಪೊಲೀಸ್‍ವತಿಯಿಂದ ಮೂರು ಸುತ್ತು ಕುಶಾಲು ತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. ರಾತ್ರಿ ಮನೆಯ ಸಮೀಪ ಅಂತ್ಯಕ್ರಿಯೆ ನಡೆಸಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲು, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಎಸ್ಪಿ ವಿಷ್ಣುವರ್ಧನ್, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮೊದಲಾದವರು ಅಂತಿಮ ದರ್ಶನ ಪಡೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ