ಉಡುಪಿ:ಮೇ-1: ಚುನಾವಣಾ ಪ್ರಚಾರ ನಿಮಿತ್ತ ಇಂದು ಉಡುಪಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇಲ್ಲಿಯ ಕೃಷ್ಣ ಮಠಕ್ಕೆ ಭೇಟಿ ನೀಡದೇ ಹಿಂತಿರುಗಿದ್ದಾರೆ.
ನೀತಿ ಸಂಹಿತೆ ಇರುವಾಗ ಮಠ- ಮಂದಿರ ಭೇಟಿ ಮಾಡಲ್ಲ. ನಾನೀಗ ಚುನಾವಣಾ ಪ್ರಚಾರದಲ್ಲಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ ಎನ್ನಲಾಗಿದೆ.
ಇನ್ನು ಕೃಷ್ಣ ಮಠಕ್ಕೆ ಭೇಟಿ ನೀಡದೇ ತೆರಳಿದ ಹಿನ್ನಲೆಯಲ್ಲಿ ಕೃಷ್ಣಮಠ ಭೇಟಿಗೆ ಬೇರೊಂದು ದಿನ ನಿಗದಿ ಮಾಡಿ. ಮಠದ ಆಡಳಿತ ಮಂಡಳಿಗೆ ಪರಿಸ್ಥಿತಿ ತಿಳಿಯಪಡಿಸಿ ಎಂದು ಬಿಜೆಪಿ ಸ್ಥಳೀಯ ನಾಯಕರಿಗೆ ಪ್ರಧಾನಿ ಮೋದಿ ತಿಳಿಸಿದ್ದಾರೆ ಎನ್ನಲಾಗಿದೆ.
ಕೃಷ್ಣಮಠಕ್ಕೆ ಭೇಟಿ ನೀಡದೇ ಪ್ರಧಾನಿ ತೆರಳಿರುವ ಬಗ್ಗೆ ಮಠದ ಪರ್ಯಾಯ ಸ್ವಾಮೀಜಿ ಪಲಿಮಾರು ಶ್ರೀ ಪ್ರತಿಕ್ರಿಯೆ ನೀಡಿದ್ದು, ಮೋದಿ ಮಠಕ್ಕೆ ಬರದಿರುವುದು ಕೊಂಚ ಬೇಸರ ಮೂಡಿಸಿದೆ. ಸ್ಥಳೀಯ ಬಿಜೆಪಿ ನಾಯಕರು ಮೋದಿ ಮಠಕ್ಕೆ ಬರಬಹುದು ಎಂದಿದ್ದರು. ಆದರೆ, ಮೋದಿಯಿಂದ ಯಾವುದೇ ಅಧಿಕೃತ ಮಾಹಿತಿ ಬಂದಿರಲಿಲ್ಲ ಎಂದಿದ್ದಾರೆ.
ಮೋದಿ ಆಗಮನದ ನಿರೀಕ್ಷೆಯಲ್ಲಿ ಮಠದಲ್ಲಿ ಕೆಲವೊಂದು ಸಣ್ಣಪುಟ್ಟ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅವರು ಇಲ್ಲಿಗೆ ಬರದೇ ಇದ್ದರೂ ಕೂಡ ಮಠದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
Karnataka assembly election,PM Modi,udupi,krishnamat