ಬೆಂಗಳೂರು:ಏ-26: ವಿಧಾನಸಭೆ ಚುನಾವಣೆಯಲ್ಲಿ ಅಂತಿಮ ಹಂತದ ಹಣಾಹಣಿಗೆ ಸಜ್ಜಾಗುತ್ತಿರುವ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿಯವರ 15 ರ್ಯಾಲಿಗಳನ್ನು ಆಯೋಜಿಸಿದೆ.
ಮೇ 1 ರಿಂದ 8ರವರೆಗೆ 5 ದಿನ ಕ್ಳಾಲ ಪ್ರತಿ ದಿನ ಮೂರು ರ್ಯಾಲಿ ಆಯೋಜಿಸಲಾಗಿದೆ. ಮೇ 1ರಂದು ಉಡುಪಿ, ಬೆಳಗಾವಿ, ಚಾಮರಾಜನಗರ, ಮೇ 3ರಂದು ಬೆಂಗಳೂರು, ಶಿವಮೊಗ್ಗ, ಕಲಬರಗಿ, ಮೇ 5ರಂದು ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ, ಮೇ 7ಕ್ಕೆ ಕೋಲಾರ, ಚಿತ್ರದುರ್ಗ, ರಾಯಚೂರು ಹಾಗೂ ಮೇ 8ಕ್ಕೆ ಬೆಂಗಳೂರು, ಮಂಗಳೂರು ಹಾಗೂ ವಿಜಯಪುರದಲ್ಲಿ ಬೃಹತ್ ರ್ಯಾಲಿಗಳನ್ನುದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ.
ಇನ್ನು ಪ್ರಧಾನಿ ಮೋದಿ ಮೇ 1ರಿಂದ ರಾಜ್ಯಕ್ಕೆ ಆಗಮಿಸಲಿರುವ ಹಿನ್ನಲೆಯಲ್ಲಿ ನಾಳೆಯಿಂದ ನಾಲ್ಕು ದಿನಗಳ ಕಾಲ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಒಟ್ಟಾರೆ ವಿಧಾನಸಭಾ ಚುನಾವಣೆ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳು ಮತದಾರನನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ಆರಂಭಿಸಿವೆ.
Karnataka Assembly election,Prime Minister Narendra Modi, campaign schedule