ಬೆಂಗಳೂರು: 2.19 ಕೋಟಿ ರೂ. ಅಕ್ರಮ ಹಣವನ್ನು ವಶಕ್ಕೆ

ಬೆಂಗಳೂರು:ಏ-23: ಬೆಂಗಳೂರಿನ ಅಲಸೂರು ಕೆರೆ ಬಳಿಯ ಚೆಕ್ ಪೋಸ್ಟ್ ನಲ್ಲಿ ಚುನಾವಣೆ ಆಯೋಗದ ಅಧಿಕಾರಿಗಳು 2.19 ಕೋಟಿ ರೂ. ಅಕ್ರಮ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಎಟಿಎಂಗಳಿಗೆ ತುಂಬಿಸಲು ಬಳಸಬೇಕಾದ ಹಣವನ್ನು ಕಾರ್ ನಲ್ಲಿ ಕೊಂಡೊಯ್ಯುತ್ತಿದ್ದಾಗ ಅಧಿಕಾರಿಗಳು ಈ ದಾಳಿ ನಡೆಸಿ ಹಣ ಜಪ್ತಿ ಮಾಡಿದ್ದಾರೆ.

ಹಳೆ ಮದ್ರಾಸ್ ರಸ್ತೆಯ ಅಲಸೂರು ಕೆರೆ ಸಮೀಪದ ಚೆಕ್ ಪೋಸ್ಟ್ ನಲ್ಲಿ ಪೋಲೀಸರು ವಾಹನಗಳ ಪ್ರಿಶೀಲನೆಯಲ್ಲಿ ತೊಡಗಿದ್ದರು. ಆ ವೇಳೆ ಆಗಮಿಸಿದ್ದ ಕಾರೊಂದರಲ್ಲಿ ಸುಮಾರು 2 ಕೋಟಿ ರೂ.. ಹಣ ಪತ್ತೆಯಾಗಿದೆ. ಕಾರಿನಲ್ಲಿದ್ದವರನ್ನು ಬಂಧಿಸಿದ ಪೋಲೀಸರು ತೆರಿಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ.

ನಗದು ಹೊಂದಿದವ್ರು ಖಾಸಗಿ ನಗದು ನಿರ್ವಹಣಾ ಸೇವೆಗಳ ಕಂಪೆನಿಗೆ ಸೇರಿದವರಾಗಿದ್ದು ಎಟಿಎಂ ಗಳಿಗೆ ಹಣ ತುಂಬಿಸಲೆಂದು ಹಣ ಪಡೆದಿದ್ದರು. ವೈಟ್ ಫಿಲ್ಡ್ ಭಾಗದ ಖಾಸಗಿ ಬ್ಯಾಂಕುಗಳ 24 ಎಟಿಎಂಗಳಲ್ಲಿ ಹಣ ತುಂಬಿಸಲು ಅವರು ಹಣವನ್ನು ಸಾಗಿಸುತ್ತಿದ್ದರು. ಆದರೆ ಮಾರ್ಗ ಮಧ್ಯೆ ಅವರ ಅಧಿಕೃತ ವಾಹನ ಕೆಟ್ಟು ನಿಂತ ಕಾರಣ ಅವರು ಹಣದ ಪೆಟ್ಟಿಗೆಗಳನ್ನು ಇನ್ನೊಂದು ಕಾರ್ ಗೆ ಬದಲಾಯಿಸಿದ್ದರು. ಈ ಸಂಬಂಧ ಆರೋಪಿಗಳು ಕೆಲ ದಾಖಲೆ ಪತ್ರಗಳನ್ನು ನೀಡಿದ್ದರಾದರೂ ಅಧಿಕಾರಿಗಳು ನಗದನ್ನು ಜಪ್ತಿ ಮಾಡಿದ್ದು ಆರೋಪಿಗಳನ್ನು ಬಂಧಿಸಿದ್ದಾರೆ” ಪೋಲೀಸರು ವಿವರಿಸಿದ್ದಾರೆ.

ಘಟನೆ ಸಂಬಂಧ ಅಲಸೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Karnataka assembly election,Illegal money,seized

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ