ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ: ಒಂದೆಡೆ ವಿಷ ಸೇವಿಸಿ ಆತ್ಮಹತ್ಯೆ ಯತ್ನ; ಇನ್ನೊಂದೆಡೆ ರಾಜೀನಾಮೆ ಬೆದರಿಕೆ

ವಿಜಯಪುರ:ಏ-4:ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಹೇಗಾದರೂ ಮಾಡಿ ಅಧಿಕಾರಕ್ಕೆ ಬರಬೇಕು ಎಂದು ಬಿಜೆಪಿ ಮುಖಂಡರು
ಹೊರಟ ಬೆನ್ನಲೇ, ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳಬಾರದು ಎಂದು ವಿಜಯಪುರದಲ್ಲಿ ಬಂಡಾಯ ಬುಗಿಲೆದ್ದಿದೆ.

ಇಂದು ಬಿಜೆಪಿ ರಾಜ್ಯಾದ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ಯತ್ನಾಳ ಬಿಜೆಪಿಗೆ ಸೇರ್ಪಡೆ ಗೊಂಡ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಭಾರೀ ಹೊರಾಟಗಳು ಆರಂಭವಾಗಿವೆ.

ಒಂದೆಡೆ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿರುವ ಕಾರ್ಯಕರ್ತರು, ಇನ್ನೊಂದೆಡೆ ಪ್ರತಿಭಟನೆ ವೇಳೆ ವಿಷ ಸೇವಿಸಿದ ಕಾರ್ಯಕರ್ತರು. ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿಯೇ ಭಿನ್ನಮತ ಭುಗಿಲ್ಲೆದ್ದಿದೆ. ಯತ್ನಾಳ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸಿದ್ದು ಇಷ್ಟೆಲ್ಲ ಘಟನೆಗಳಿಗೆ ಕಾರಣವಾಗಿದೆ.

ಯತ್ನಾಳ ಅವರ ಬಿಜೆಪಿ ಸೇರ್ಪಡೆಗೆ ಹಲವು ದಿನಾಂಕಗಳ ನಿಗದಿ ಮಾಡಿ ಅವನ್ನು ಮತ್ತೆ ಮುಂದೂಡಲಾಗಿತ್ತು ಆದರೆ ಇಂದು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಕ್ಕೆ ಪ್ರತಿಭಟನೆಗಳು ಆರಂಭಗೊಂಡಿವೆ. ನಗರದ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿರುವ ವೇಳೆ ಕಾರ್ಯಕರ್ತ ಬಿಜೆಪಿ ಯುವ ಮೋರ್ಚಾ ಉಪಾದ್ಯಕ್ಷ
ಬಾಬು ಜಗದಾಳ ಎಂಬಾತ ವಿಷ ಸೇವಿಸಿ ಆತ್ಮಹತ್ಯೆಗೆಗೆ ಯತ್ನಿಸಿದ್ದಾರೆ. ಇನ್ನು ಸ್ಥಳದಲ್ಲೆ ಇದ್ದ ಬಿಜೆಪಿ ಕಾರ್ಯಕರ್ತರು ವಿಷದ ಬಾಟಲಿಯನ್ನು ಕಸಿದುಕೊಂಡು ಆತನಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನೊಂದೆಡೆ ಮಹಾನಗರ ಪಾಲಿಕೆಯ ಸದಸ್ಯರಾದ ಗೋಪಾಲ್ ಘಟಕಾಂಬಳೆ, ಪ್ರಕಾಶ್ ಮಿರ್ಜಿ, ಶಂಕರ್ ಕುಂಬಾರ್, ರಾಹುಲ್ ಜಾಧವ್, ಅಪ್ಪು ಸಜ್ಜನ್, ಆನಂದ ದುಮಾಳೆ, ಅಲ್ತಾಪ್ ಇಟಗಿ, ಬೆಲ್ಲದ್ ಹೀಗೆ ಒಟ್ಟು ೧೦ ಜನ ಸದಸ್ಯರು ಒಂದು ವೇಳೆ ಯತ್ನಾಳ್ ಅವರಿಗೆ ಟಿಕೇಟ್ ನೀಡಿದರೆ ತಾವು ಮಹಾನಗರ ಪಾಲಿಕೆ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡುವದಾಗಿ ಬೆದರಿಕೆಯೊಡ್ಡಿದ್ದಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಬಸನಗೌಡ ಪಾಟೀಲ್ ಯತ್ನಾಳ ಒಬ್ಬ ವಿವಾದಿತ ವ್ಯಕ್ತಿ. ಅಂತಹ ವ್ಯಕ್ತಿಯನ್ನು ಬಿಜೆಪಿಗೆ ಸೇರಿಸಿಕೊಂಡಿರುವದು ಸರಿ ಅಲ್ಲ. ಪ್ರಹ್ಲಾದ್ ಜೋಶಿ ಕೂಡಾ ಯತ್ನಾಳ ಸೇರ್ಪಡೆ ಕಾರ್ಯಕ್ರಮಕ್ಕೆ ಹೋಗಿಲ್ಲ. ಯತ್ನಾಳ ಸೇರ್ಪಡೆ ವಿಚಾರ ಸ್ಥಳಿಯರ ನಾಯಕರ ಗಮನಕ್ಕೂ ತಂದಿಲ್ಲ. ಯತ್ನಾಳ ಸಾಕಷ್ಟು ಬಾರಿ ರಾಜ್ಯ ಬಿಜೆಪಿ ನಾಯಕರ ವಿರುದ್ದವೇ ವಾಗ್ದಾಳಿ ನಡೆಸಿದ್ದಾರೆ. ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವದು ಒಳ್ಳೆಯ ಬೆಳವಣಿಗೆ ಅಲ್ಲ. ಮುಂದಿನ ದಿನಗಳಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸಿ ತಮ್ಮ ನಿರ್ಣಯ ತಿಳಿಸುವದಾಗಿ ಹೇಳಿದರು.

Assembly election,basanagouda patil yatnal,bjp,join

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ