ಮೈಸೂರು:ಮಾ-27: ವಿಧಾಸಭಾ ಚುನಾವಣೆ ಎದುರಿಸಲು ಜೆಡಿಎಸ್ ಸರ್ವರೀತಿಯಲ್ಲೂ ಸಜ್ಜಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ಜೆ ಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್ ಸ್ವಂತ ಬಲದ ಮೇಲೆ ಸರಳ ಬಹುಮತ ಪಡೆಯಲಿದೆ. ಕಾಂಗ್ರೆಸ್ ಜೊತೆ ಮೈತ್ರಿ ವಿಚಾರದ ಬಗ್ಗೆ ದೇವೇಗೌಡರ ಹೇಳಿಕೆ ವ್ಯಂಗ್ಯದಿಂದ ಕೂಡಿದ್ದು, ಇದನ್ನ ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ರಾಜ್ಯದಲ್ಲಿ ಒಂದೇ ಹಂತದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿರುವುದು ಒಳ್ಳೆಯದು. ಜೆಡಿಎಸ್ ಇದನ್ನು ಸ್ವಾಗತಿಸುತ್ತದೆ ಎಂದು ಹೆಚ್ಡಿಕೆ ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂಬ ಸಿ ಫೋರ್ ವೋಟರ್ಸ್ ಸಮೀಕ್ಷೆ ಹಸಿಸುಳ್ಳು. ಸಿಫೋರ್ ಮಾಲೀಕರು ಯಾವಾಗಲೂ ಸಿಎಂ ಮನೆ ಕಾಂಪೌಂಡ್ ಒಳಗೆ ಇರುವವರು. ಅವರ ಸಮೀಕ್ಷೆಗಳನ್ನ ಜನ ನಂಬುವುದಿಲ್ಲ ಎಂದು ತಿಳಿಸಿದರು.
Vidhan sabha election,H D Kumaraswamy,JD(S) not to have alliance